# Uppinangady: ಏಕಮುಖ ಪ್ರೀತಿ, ವರನ ಬೈಕಿಗೆ ಬೆಂಕಿ; ಆರೋಪಿ ಪತ್ತೆ!!

- Link: https://hosakannada.com/news/crime-news-lover-set-the-grooms-bike-on-fire-because-the-girl-he-loved-was-married-to-someone-else-latest-news/
- Published: 2024-01-12T14:29:12+00:00
- Author: ಕೆ. ಎಸ್. ರೂಪಾ

Puttur: ತಾನು ಪ್ರೀತಿಸಿದ ಯುವತಿ ಬೇರೆ ಮದುವೆಯಾಗಿದ್ದಾಳೆಂಬ ಸಿಟ್ಟಿನಲ್ಲಿ ವರನಿಗೆ ಸೇರಿದ ಬೈಕನ್ನು
ರಾತ್ರಿ ಸಮಯದಲ್ಲಿ ಸುಟ್ಟು ಹಾಕಿದ ಕೃತ್ಯವೊಂದು ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು
ಮಾಧ್ಯಮವೊಂದು ವರದಿ ಮಾಡಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Sponsored

ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಪಾದಾಳದ ಸಂದೀಪ್‌ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿರುವ ಕುರಿತು
ವರದಿಯಾಗಿದೆ. ಪ್ರೀತಿಸಿದ ಹುಡುಗಿ ಬೇರೊಬ್ಬನ ಜೊತೆ ಮದುವೆ ಆಗಿದ್ದಕ್ಕೆ ಈ ರೀತಿಯಾಗಿ ಮಾಡಿದ್ದೇನೆ
ಎಂದು ಆರೋಪಿ ಹೇಳಿದ್ದಾನೆಂದು ವರದಿಯಾಗಿದೆ.

Advertisement

Advertisement

ತನ್ನದೇ ಗ್ರಾಮದ ಯುವತಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಜ.3 ರಂದು ಬೇರೊಬ್ಬ
ಯುವಕನೊಂದಿಗೆ ಮದುವೆಯಾಗಿತ್ತು ಎನ್ನಲಾಗಿದೆ. ಆಕೆಯನ್ನು ಮದುವೆಯಾದ ವ್ಯಕ್ತಿಯ ಮೇಲೆ ಈ ಆರೋಪಿಗೆ 
ಸಿಟ್ಟಿತ್ತು ಎನ್ನಲಾಗಿದ್ದು, ಜ.6 ರಂದು ಈಕೆ ತನ್ನ ಗಂಡನೊಂದಿಗೆ ತವರಿಗೆ ಬಂದಿದ್ದಳು.

**ಇದನ್ನೂ ಓದಿ: [MRPL ನಲ್ಲಿ ಉದ್ಯೋಗಾವಕಾಶ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಹೆಚ್ಚಿನ ವಿವರ ಇಲ್ಲಿದೆ!!](https://hosakannada.com/2024/01/12/mrpl-recruitment-2024-assistant-engineer-posts-latest-updates/)**

ರಾತ್ರಿ ಸಮಯದಲ್ಲಿ ಮನೆಯ ಸಮೀಪದ ನಿಲ್ಲಿಸಿದ್ದ ಬೈಕಿಗೆ ಬೆಂಕಿ ಹಚ್ಚಲಾಗಿತ್ತು. ಬೈಕನ್ನು 100 ಕೀ.
ಮೀ.ದೂರಕ್ಕೆ ಒಯ್ದು ಬೆಂಕಿ ಹಚ್ಚಲಾಗಿತ್ತು. ಈ ಕುರಿತು ವರ ಉಪ್ಪಿನಂಗಡಿಗೆ ಪೊಲೀಸರಿಗೆ ದೂರು ನೀಡಿದ್ದರು.
ಇದೀಗ ಆರೋಪಿ ಬೈಕ್‌ ಸುಟ್ಟಿದ್ದು ಯುವತಿಯನ್ನು ಮದುವೆಯಾದ ವ್ಯಕ್ತಿಯ ಮೇಲಿನ ಸಿಟ್ಟಿನಿಂದ ಮಾಡಿರುವುದಾಗಿ
ಹೇಳಿದ್ದಾನೆ ಎಂದು ಪೊಲೀಸರಲ್ಲಿ ಹೇಳಿರುವುದು ವರದಿಯಾಗಿದೆ.

Advertisement
