# Crime: ಕೊಡಗು: ಸ್ಮಶಾನದಲ್ಲಿ ಗಾಂಜಾ ಗಿಡ ಬೆಳೆಸಿದ ಆರೋಪಿ ವಶ!

- Link: https://hosakannada.com/news/crime-kodagu-accused-arrested-for-growing-marijuana-plants-in-a-cemetery/
- Published: 2025-03-17T18:31:42+00:00
- Author: ಕಾವ್ಯ ವಾಣಿ

Crime: ಸ್ಮಶಾನ ಜಾಗದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಆರೋಪಿಯೋರ್ವನನ್ನು ಪೊಲೀಸರು ಗಾಂಜಾ ಸಮೇತ
ಬಂಧಿಸಿದ್ದಾರೆ. ಹೇರೂರು ಗ್ರಾಮದ ಪ್ರಶಾಂತ್ (29) ಎಂಬಾತ ಬಂಧನಕ್ಕೊಳಗಾಗಿರುವ ಆರೋಪಿ ಆಗಿದ್ದು ಈತನಿಂದ
1 ಕೆ. ಜಿ. 730 ಗ್ರಾಂ ತೂಕದ 19 ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.

Sponsored

ಈತ ಕುಶಾಲನಗರ ಶೈಲಜಾ ಬಡಾವಣೆಯಲ್ಲಿರುವ ಸ್ಮಶಾನ ಜಾಗದಲ್ಲಿ ನಿಷೇಧಿತ ಗಾಂಜಾ ಗಿಡಗಳನ್ನು ಬೆಳೆಸಿರುವ
ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.

Advertisement

Advertisement

 

 

Advertisement
