# 12 ರಿಂದ 18 ವಯೋಮಾನದವರಿಗೂ ಸಿದ್ಧವಾಯಿತು ಲಸಿಕೆ | ತುರ್ತು ಬಳಕೆಗೆ ಸಿಕ್ಕಿತು ಅನುಮೋದನೆ

- Link: https://hosakannada.com/news/covid-vaccine-for-children/
- Published: 2021-08-20T21:48:58+00:00
- Author: Praveen Chennavara

ಕೋವಿಡ್ ಸೋಂಕಿನ ವಿರುದ್ಧ ಝೈಡಸ್ ಕ್ಯಾಡಿಲಾ ಸಂಸ್ಥೆ ಸಿದ್ಧಪಡಿಸಿರುವ 3 ಡೋಸ್ ಗಳ ಲಸಿಕೆಯ ತುರ್ತು
ಬಳಕೆಗೆ ಆ.20ರಂದು ಅನುಮೋದನೆ ಸಿಕ್ಕಿದೆ

Sponsored

ಸೂಜಿ ರಹಿತ ಲಸಿಕೆಯಾಗಿರುವ ಮೂರು ಡೋಸ್ ಪ್ರಮಾಣದ ZyCov-D ಲಸಿಕೆಯನ್ನು ತುರ್ತುಬಳಕೆಗೆ ಅನುಮೋದನೆ
ನೀಡುವಂತೆ ಕೇಂದ್ರ ಆರೋಗ್ಯ ತಜ್ಞರು ಶಿಫಾರಸ್ಸು ಮಾಡಿದ ಬೆನ್ನಲ್ಲೇ ಇದಕ್ಕೆ ಅನುಮೋದನೆ ಸಿಕ್ಕಿದೆ.

Advertisement

Advertisement

ಝೈಕೋವ್-ಡಿ ವಿಶ್ವದ ಮೊದಲ ಡಿಎನ್ಎ ಲಸಿಕೆಯಾಗಿದ್ದು, ಈಗಾಗಲೇ ದೇಶದಲ್ಲಿ ಸೆರಂ ಇನ್ಸ್ಟಿಟ್ಯೂಟ್ ನ
ಕೋವಿಶೀಲ್ಡ್, ಭಾರತ್ ಬಯೋಟೆಕ್ ನ ಕೊವಾಕ್ಸಿನ್, ರಷ್ಯಾದ ಸ್ಪುಟ್ನಿಕ್ ವಿ ಬಳಕೆಯಲ್ಲಿದ್ದು, ಇದಲ್ಲದೆ
ಒಟ್ಟು 2 ಲಸಿಕೆಗಳಾದ ಅಮೆರಿಕದ ಮಾಡರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್ ಲಸಿಕೆಗಳು ತುರ್ತು ಬಳಕೆ
ಅನುಮೋದನೆ ಪಡೆದಿವೆ.

ಈ ಮೂಲಕ ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ 6ನೇ ಲಸಿಕೆ ಎಂಬ ಕೀರ್ತಿಗೆ ZyCoV-D ಪಾತ್ರವಾಗಿದೆ.

ಭಾರತದ ಔಷಧ ನಿಯಂತ್ರಕ ಜನರಲ್‌ನ ತಜ್ಞರ ಸಮಿತಿಯು ಈ ಲಸಿಕೆಯ ತುರ್ತು ಬಳಕೆಯನ್ನು ಅನುಮೋದಿಸಿದೆ. 
ಈ ಲಸಿಕೆಯ 2 ಡೋಸ್‌ಗಳ ಪರಿಣಾಮದ ಕುರಿತು ಸಮಿತಿಯು ಫಾರ್ಮಾ ಕಂಪನಿಯಿಂದ ಹೆಚ್ಚುವರಿ ದತ್ತಾಂಶವನ್ನು
ಕೋರಿದೆ ಎನ್ನಲಾಗಿದೆ.

ಜೆನೆರಿಕ್ ಫಾರ್ಮಾಸ್ಯುಟಿಕಲ್ ಕಂಪನಿಯಾಗಿರುವ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಜುಲೈ 1 ರಂದು 
ZyCoV-D ಯ ತುರ್ತು ಬಳಕೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. 28 ಸಾವಿರ ಸ್ವಯಂಸೇವಕರ ಮೇಲೆ ನಡೆಸಿದ
ಕೊನೆಯ ಹಂತದ ಪ್ರಯೋಗದ ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಲಸಿಕೆಯ ಪರಿಣಾಮಕಾರಿತ್ವವು
ಶೇ. 66.6 ರಷ್ಟಿದೆ ಎಂದು ಈ ವರದಿಯಿಂದ ತಿಳಿದುಬಂದಿತ್ತು. ಈ ಲಸಿಕೆ 12 ರಿಂದ 18 ವಯೋಮಾನದವರಿಗೂ
ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಅದರ ಪ್ರಾಯೋಗಿಕ ಡೇಟಾವನ್ನು ಇನ್ನೂ
ಪ್ಯಾರ್ ರಿವ್ಯೂ ಮಾಡಲಾಗಿಲ್ಲ ಎನ್ನಲಾಗಿದೆ.

Advertisement
