# ಸೌಜನ್ಯ ಪ್ರಕರಣ ಮರು ತನಿಖೆ- ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಾಗತ

- Link: https://hosakannada.com/news/courtesy-case-re-investigation-welcome-to-shri-kshetra-dharmasthala/
- Published: 2026-09-21T19:13:13+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ: ಸರ್ವೋಚ್ಛ ನ್ಯಾಯಾಲಯ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಪ್ಪಿಸಿರುವ ನಿರ್ಧಾರ ಕುರಿತು
ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ. ಕುಮಾರಿ ಸೌಜನ್ಯಳಿಗೆ
ನ್ಯಾಯ ದೊರೆಯಬೇಕು ಎನ್ನುವುದು ಶ್ರೀ ಕ್ಷೇತ್ರದ ಆಶಯ. ಈ ಆದೇಶಿಸಲಾಗಿರುವ ಮರು ತನಿಖೆಯು ಸಂಪೂರ್ಣ
ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಯಲಿ ಮತ್ತು ಈ ಮೂಲಕ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆಯಲಿ
ಎಂದು ನಾವು ಆಶಿಸುತ್ತೇವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ದೇವಾಲಯ ಕಚೇರಿಯ ವ್ಯವಸ್ಥಾಪಕ ಪಾರ್ಶ್ವನಾಥ್‌
ಜೈನ್‌ ತಿಳಿಸಿದ್ದಾರೆ.

Sponsored

Advertisement

Advertisement

Advertisement
