# ನಿರ್ಜನ ಪ್ರದೇಶದಲ್ಲಿ ಕಾರಿನ ಹಿಂಬದಿ ಸೆಕ್ಸ್ ಮಾಡುತ್ತಿದ್ದ ಜೋಡಿ…ಅಲ್ಲಿಗೆ ಬಂದ ಕಳ್ಳರು ಕಾರು ಜೊತೆಗೆ ಬಟ್ಟೆಯನ್ನೂ ಕದ್ದರು!!!

- Link: https://hosakannada.com/news/couple-doing-sex-in-car-and-caught-by-theif/
- Published: 2022-09-03T16:46:17+00:00
- Author: Mallika

ಯಾವುದನ್ನು ಎಲ್ಲಿ ಮಾಡಬೇಕೋ ಅಲ್ಲೇ ಮಾಡಿದರೆ ಚೆನ್ನ‌ ಅನ್ನೋ ಮಾತೊಂದಿದೆ. ಹಾಗೇ ಆಗದೇ ಹೋದಾಗ, ಏನಾದರೂ
ಎಡವಟ್ಟು ಮಾಡೋಕೆ ಹೋದರೆ ಏನಾಗುತ್ತೆ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ ಎನ್ನಬಹುದು.

Sponsored

ಏಕೆಂದರೆ ಇಲ್ಲೊಂದು ಜೋಡಿ ನಡು ರಾತ್ರಿಯಲ್ಲಿ ನಿರ್ಜನ ಪ್ರದೇಶದ ಪಾರ್ಕಿಂಗ್‌ನಲ್ಲಿ ನಿಂತಿದ್ದ ತಮ್ಮ
ಕಾರ್ ಹಿಂಬದಿಯ ಸೀಟ್‌ನಲ್ಲಿ ಸೆಕ್ಸ್ ಮಾಡುತ್ತಿದ್ದರು. ಈ ವೇಳೆ ಅಚಾತುರ್ಯವೊಂದು ನಡೆದು ಹೋಗಿದೆ.
ತಮ್ಮ ಸುಂದರ ನೆನಪುಗಳನ್ನು ದಾಖಲಿಸಿಕೊಳ್ಳಬೇಕು ಎಂದುಕೊಂಡಿದ್ದ ಜೋಡಿಗೆ, ಜೀವನದ ಅತ್ಯಂತ ಕಹಿ ದಿನ
ಎಂದೇ ದಾಖಲಾಗಿದೆ ಎಂದೇ ಹೇಳಬಹುದು.

Advertisement

Advertisement

ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಕಾರೊಂದನ್ನು ನೋಡಿದ ಕಳ್ಳರು, ಇದನ್ನು ಕದಿಯಲು ಹೋಗಿದ್ದಾರೆ. ಆದರೆ
ಈ ಸಂದರ್ಭದಲ್ಲಿ ಕಾರ್‌ನ ಹಿಂಬದಿ ಸೀಟ್‌ನಲ್ಲಿ ಜೋಡಿ ಸೆಕ್ಸ್ ಮಾಡುತ್ತಿರುವುದನ್ನು ಕಂಡಿದ್ದಾರೆ.
ಕೂಡಲೇ ಇವರು ಜೋಡಿಯ ಕಾರ್ ಮಾತ್ರವಲ್ಲ ಜೋಡಿಯ ಪರ್ಸ್ ಹಾಗೂ ಮೊಬೈಲ್‌ಗಳನ್ನು ಕದ್ದುಕೊಂಡು ಹೋಗಿದ್ದಾರೆ.
ಎಲ್ಲಾ ಬಿಟ್ಟು ದಂಪತಿಗಳ ಬಟ್ಟೆ ಕೂಡಾ ತಗೊಂಡು ಹೋಗಿದ್ದಾರೆ. ಎಲ್ಲ ತಗೊಂಡು, ಕೊನೆಗೆ ದಂಪತಿಗಳನ್ನು
ಬೆತ್ತಲೆಯಾಗಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ.

ಆಗಸ್ಟ್ 17 ರಂದು ಬ್ರೆಜಿಲ್‌ನಲ್ಲಿ ( Brazil) ನಡೆದ ಘಟನೆ ಇದಾಗಿದೆ. ಇದರ ಸಿಸಿಟಿವಿ ದೃಶ್ಯಾವಳಿಗಳು
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬಿಳಿ ಬಣ್ಣದ ಕಾರಿನೊಳಗೆ ಈ ಜೋಡಿ ರೋಮ್ಯಾನ್ಸ್ ಮೂಡಲ್ಲಿ 
ಎಲ್ಲಾ ಬಟ್ಟೆ ಕಳಚಿ ಸಂಭೋಗ ಮಾಡುತ್ತಿತ್ತು. ಈ ವೇಳೆ ಮೂರು ಮಂದಿ ಕಳ್ಳರ ಗುಂಪು ಅವರ ಮೇಲೆ ದಾಳಿ 
ನಡೆಸಿದೆ. ಹುಡುಗ ಹುಡುಗಿಯ ಹಣವನ್ನು ಮಾತ್ರವಲ್ಲದೆ, ಅವರ ಬಟ್ಟೆ ಬರೆಗಳನ್ನೂ ತೆಗದುಕೊಂಡು ಹೋಗಿದೆ.
ಸ್ವಲ್ಪ ದೂರ ಹೋದ ಬಳಿಕ, ಕಾರ್‌ನ ವಿಂಡೋದಿಂದ ಬಟ್ಟೆಗಳನ್ನು ಎಸೆದಿದ್ದಾರೆ.

ಅಂದಾಜು ರಾತ್ರಿ 9.30ರ ಸುಮಾರಿಗೆ ರಸ್ತೆ ಬದಿಯಲ್ಲಿ ನಿಂತಿದ್ದ ಕಾರ್‌ನ ಬಳಿ ಈ ಘಟನೆ ನಡೆದಿದೆ. 
ನಂತರ ದಂಪತಿಗಳು ತಕ್ಷಣ ತಮ್ಮ ಬಟ್ಟೆಗಳನ್ನು ಎತ್ತಿಕೊಂಡಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು
ವೈರಲ್ ಆದ ನಂತರ, ಪೊಲೀಸರು ಅಪರಿಚಿತ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವರದಿಯ ಪ್ರಕಾರ,
ಬ್ರೆಜಿಲ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕ್ರಿಯೆ (Sex in Public) ನಡೆಸುವುದು ಕಾನೂನುಬಾಹಿರವಾಗಿದೆ.
ಅಂತಹ ಪರಿಸ್ಥಿತಿಯಲ್ಲಿ ಜೋಡಿಗಳು ದಂಡದ ಜೊತೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಬಹುದು.

ಈ ಘಟನೆಯು ಬ್ರೆಜಿಲ್‌ನಲ್ಲಿ (Brazil) ಆಗಸ್ಟ್ 17 ರಂದು ನಡೆದಿದ್ದು, ವಿಡಿಯೋದ (CCTV Video) 
ನಿನ್ನೆ, 1 ನೇ ಸೆಪ್ಟೆಂಬರ್‌ನ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಅಪರಾಧಿಗಳನ್ನು ಬಂಧಿಸಲಾಗಿದೆಯೇ ಅಥವಾ ಸಂತ್ರಸ್ತರು, ಅವರ ಗುರುತುಗಳು ತಿಳಿದಿಲ್ಲ ಅಧಿಕಾರಿಗಳಿಗೆ
ದೂರು ಸಲ್ಲಿಸಿದ್ದಾರೆಯೇ ಎಂಬುದು ಕೂಡ ತಿಳಿದಿಲ್ಲ.

Advertisement
