# ತಮಿಳುನಾಡು ಜನತೆಗೆ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟ ಮಾಡಿದ ಸಿಎಂ ವಿಜಯ್‌

- Link: https://hosakannada.com/news/cm-vijay-announces-another-important-decision-for-the-people-of-tamil-nadu/
- Published: 2026-07-01T09:45:59+00:00
- Author: ಹೊಸಕನ್ನಡ ನ್ಯೂಸ್

ತಮಿಳುನಾಡಿನಲ್ಲಿ ವಿಜಯ್‌ ನೇತೃತ್ವದ ಟಿವಿಕೆ ಸರಕಾರವು ಸಾರ್ವಜನಿಕರ ಅನುಕೂಲಕ್ಕೆಂದು ಇನ್ನೊಂದು 
ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಮುಂದೆ ಸಾಮಾನ್ಯ ಬಸ್ಸುಗಳ ಬದಲು ಕೇವಲ ಹವಾನಿಯಂತ್ರಿತ
ಸಾರಿಗೆ ಬಸ್‌ಗಳನ್ನು ಮಾತ್ರ ಖರೀದಿ ಮಾಡಲು ನಿರ್ಧರಿಸಿದೆ.

Sponsored

ಅಂದರೆ ಹಂತ ಹಂತವಾಗಿ ಹವಾನಿಯಂತ್ರಿತವಲ್ಲದ ಬಸ್ಸುಗಳು ನೇಪಥ್ಯಕ್ಕೆ ಸೇರಲಿದೆ ಹಾಗೂ ಹಳ್ಳಿಹಳ್ಳಿಗೂ
ಎಸಿ ಬಸ್‌ ಸಂಚಾರ ಆರಂಭವಾಗಲಿದೆ. ಮುಖ್ಯಮಂತ್ರಿ ವಿಜಯ್‌ ಈ ಕುರಿತು ಸೂಚನೆಯನ್ನು ನೀಡಿದ್ದಾರೆ ಎಂದು
ತಮಿಳುನಾಡು ಸಾರಿಗೆ ಸಚಿವ ವಿಜಯ್‌ ತಮಿಳನ್‌ ಪಾರ್ಥಿಬನ್‌ ಮಂಗಳವಾರ ತಿಳಿಸಿದ್ದಾರೆ.

Advertisement

Advertisement

ಪತ್ರಕರ್ತರ ಜೊತೆ ಮಾತನಾಡಿದ ಸಿಎಂ ವಿಜಯ್‌, ʼಜನಸಾಮಾನ್ಯರೂ ಹವಾನಿಯಂತ್ರಿತ ಬಸ್‌ಗಳಲ್ಲಿ ಆರಾಮವಾಗಿ
ಪ್ರಯಾಣಿಸಬೇಕೆಂದು ಸಿಎಂ ವಿಜಯ್‌ ಬಯಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ಆರಾಮವಾಗಿ ಪ್ರಯಾಣಿಸಲು
ಬಸ್‌ಗಳಲ್ಲಿ ಅಗತ್ಯವಾದ ಸೌಲಭ್ಯವಿರಬೇಕುʼ ಎಂದು ಹೇಳಿದ್ದಾರೆ.

ವಿಜಯ್‌ ಅವರು ಈಗಾಗಲೇ ಮಂದಿರ ಹಾಗೂ ಶಾಲೆಗಳ ಸುತ್ತಮುತ್ತಲಿನ ಬಾರ್‌ಗಳನ್ನು ರದ್ದುಗೊಳಿಸಲು ಆದೇಶಿಸಿದ್ದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳಿಗೆ ಚಿನ್ನದ ಸರ, ರೈತರ ಸಾಲ ಮನ್ನಾ ಸೇರಿ ಅನೇಕ ಜನಾನುರಾಗಿ
ಕ್ರಮ ಪ್ರಕಟಿಸಿದ್ದರು.

 

Advertisement
