# ಸಿನಿಮಾ ಚಿತ್ರೀಕರಣದ ವೇಳೆ ನಟ ಸಿಡಿಸಿದ ಗುಂಡಿಗೆ ಛಾಯಾಗ್ರಾಹಕಿ ಬಲಿ | ಮನರಂಜನೆ ಓರ್ವ ಪ್ರತಿಭಾನ್ವಿತ ಹುಡುಗಿಯನ್ನು ಬಲಿ ಪಡೆದಿದೆ

- Link: https://hosakannada.com/news/cinema-shooting-shoot-out-america/
- Published: 2021-10-24T05:45:39+00:00
- Author: ಹೊಸಕನ್ನಡ ನ್ಯೂಸ್

ಸಿನಿಮಾ ಚಿತ್ರೀಕರಣದ ವೇಳೆ ಅಮೆರಿಕದ ನಟ ಆಲೆಕ್ ಬಾಲ್ಡ್‌ವಿನ್ ಬಳಸುತ್ತಿದ್ದ ಬಂದೂಕಿನಿಂದ ಹಾರಿದ
ಗುಂಡು ಛಾಯಾಗ್ರಾಹಕಿಯನ್ನು ಬಲಿ ಪಡೆದಿದೆ. ನ್ಯೂ ಮೆಕ್ಸಿಕೊದಲ್ಲಿ ಚಿತ್ರೀಕರಣದ ಸೆಟ್‌ನಲ್ಲಿ ಈ ದುರ್ಘಟನೆ
ನಡೆದಿರುವುದಾಗಿ ಅಮೆರಿಕದ ಅಧಿಕಾರಿಗಳು ಗತಿಳಿಸಿದ್ದಾರೆ.

Sponsored

‘ರಸ್ಟ್’ ಹೆಸರಿನ ಸಿನಿಮಾ ಚಿತ್ರೀಕರಣದಲ್ಲಿ ಪಾರ್ಪಟಿ ಗನ್‌ನಿಂದ ನಟ ಬಾಲ್ಡ್ವಿನ್ ಸಿಡಿಸಿದ ಗುಂಡು
ಒಬ್ಬರ ಸಾವಿಗೆ ಕಾರಣವಾಗಿದೆ.

Advertisement

Advertisement

![](https://hosakannada.com/wp-content/uploads/2021/10/IMG_20211024_054013.jpg)

**ಬಾಲ್ಡ್ವಿನ್**

ಘಟನೆಯಲ್ಲಿ ಛಾಯಾಗ್ರಾಹಕಿ ಹಲಿನಾ ಹಚಿನ್ಸ್ (42) ಸಾವಿಗೀಡಾದರೆ, ನಿರ್ದೇಶಕ ಜೋಲ್ ಸೌಜಾ (48) ಗಾಯಗೊಂಡಿದ್ದಾರೆ.

19ನೇ ಶತಮಾನದ ಕಥೆಯಾಧಾರಿತ ಸಿನಿಮಾದಲ್ಲಿ ಬಾಲ್ಡ್‌ವಿನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಘಟನೆ ಸಂಬಂಧ ತನಿಖೆ ಮುಂದುವರಿದಿದ್ದು, ಯಾವುದೇ ದೂರು ದಾಖಲಾಗಿಲ್ಲ.

Advertisement
