# ಮಕ್ಕಳ ಟಿಫಿನ್ ಬಾಕ್ಸ್ ನಲ್ಲಿತ್ತು ಬಾಂಬ್!!

- Link: https://hosakannada.com/news/children-and-bomb-in-their-tiffin-box/
- Published: 2022-06-07T12:12:12+00:00
- Author: ನಿಶ್ಮಿತಾ ಎನ್.

ಭಾರತ ಹಾಗೂ ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಡೋನ್ ಮುಖಾಂತರವಾಗಿ ಇಟ್ಟಿದ್ದ 3 ಸ್ಫೋಟಕಗಳು
ಮಕ್ಕಳ ಟಿಫಿನ್ ಬಾಕ್ಸ್ ಗಳಲ್ಲಿ ಪತ್ತೆಯಾದ ಮಾಹಿತಿ ಲಭ್ಯವಾಗಿದೆ.

Sponsored

ಜಮ್ಮು ಎಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ ಮಾಹಿತಿಯಂತೆ ಅಖನೂರ್ ಸೆಕ್ಟರ್‌ನ ಕನಚಕ್‌ ಕಂಟೊವಾಲ-ದಯಾರನ್
ಪ್ರದೇಶದಲ್ಲಿ ಟೈಮರ್ ಸೆಟ್ ಮಾಡಿದ್ದ ಸ್ಫೋಟಕಗಳು ಮಕ್ಕಳ ಟಿಫಿನ್ ಬಾಕ್ಸ್ ಗಳಲ್ಲಿ ಇಂದು ಪತ್ತೆಯಾಗಿದೆ
ಎಂದು ತಿಳಿಸಿದ್ದಾರೆ.

Advertisement

Advertisement

ನಿನ್ನೆ ರಾತ್ರಿ ಜಮ್ಮು ಜಿಲ್ಲೆಯ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಸದ್ದು ಕೇಳಿಸಿತ್ತು.
ಡೋನ್ ಇರಬಹುದೆಂದು ಅವಮಾನಿಸಿದ್ದ ಗಡಿ ಭದ್ರತಾ ಪಡೆ ಯೋಧರು ತಕ್ಷಣವೇ ಗುಂಡಿನ ದಾಳಿ ನಡೆಸಿದ್ದರು.
ಸ್ಫೋಟಕಗಳಿದ್ದ ಪಾಕ್ ಡೋನ್ ಧರೆಗುರುಳಿಸಿದ ಜಮ್ಮು ಪೊಲೀಸರು ಕೂಡಲೇ ಆ ಪ್ರದೇಶವನ್ನು ಸುತ್ತುವರಿದು
ಡೋನ್ ನಿರೋಧಕ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ. ಅದೇ ದಿನ ರಾತ್ರಿ 11 ಗಂಟೆಗೆ
ಮತ್ತೆ ಡೋನ್ ಹಾರಾಟ ಗಮನಿಸಿದ್ದ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು ಎಂದು ಎಡಿಜಿಪಿ ಮಾಹಿತಿ
ನೀಡಿದ್ದಾರೆ.

Advertisement
