# ಚಾರ್‌ಧಾಮ್‌ ಯಾತ್ರೆ-ಹೃದಯಾಘಾತದಿಂದ ಕುಂಪಲ ನಿವಾಸಿ ನಿಧನ

- Link: https://hosakannada.com/news/char-dham-yatra-kumpala-resident-dies-of-a-heart-attack/
- Published: 2026-09-23T12:57:20+00:00
- Author: ಹೊಸಕನ್ನಡ ನ್ಯೂಸ್

ಉಳ್ಳಾಲ: ಕುಂಪಲದ ವಿದ್ಯಾನಗರ ನಿವಾಸಿ ರಾಜೇಶ್‌ ಗಾಣಿಗ (53) ಎಂಬುವವರು ಉತ್ತರಾಖಂಡದ ಯಮುನೋತ್ರಿಯಲ್ಲಿ
ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

Sponsored

ಸೆ.18 ರಂದು ರಾಜೇಶ್‌ ಅವರು ಉಳ್ಳಾಲದ ಹದಿನಾಲ್ಕು ಜನರೊಂದೊಗೆ ಮಂಗಳೂರಿನಿಂದ ಚಾರ್‌ಧಾಮ್‌ ಯಾತ್ರೆಗೆ
ಹೊರಟಿದ್ದು, ಸೋಮವಾರ ಉತ್ತರಾಖಂಡಕ್ಕೆ ತಲುಪಿ ಪ್ರವಾಸಿ ಕೇಂದ್ರದ ಕೊಠಡಿಯಲ್ಲಿ ವಿಶ್ರಾಂತಿ ಪಡೆದಿತ್ತು.
ಮಂಗಳವಾರ ಏಳು ಕಿ.ಮೀ. ಪಾದಯಾತ್ರೆ ಮಾಡಿದ ರಾಜೇಶ್ ‌ಅವರು ಕುರ್ಚಿಯಲ್ಲಿ ಕುಳಿತಿದ್ದು, ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನ ಮಾಡಿದರೂ ಅವರು ದಾರಿಯಲ್ಲೇ ನಿಧನ ಹೊಂದಿದ್ದಾರೆ.

Advertisement

Advertisement

Advertisement
