# Accident: ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು!

- Link: https://hosakannada.com/news/car-collides-with-lorry-three-dead-on-the-spot/
- Published: 2025-04-27T16:27:45+00:00
- Author: ಕಾವ್ಯ ವಾಣಿ

Accident: ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ
ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಬಳಿ ನಡೆದಿದೆ.

Sponsored

ಮಹೇಶ್ (32), ಪ್ರೇಮ್ ಕುಮಾರ್ (25) ಮತ್ತು ಅನ್ನದಾನಯ್ಯ(25) ಮೃತರು. ನಿತ್ಯಾನಂದ ಎಂಬುವವರು ಗಂಭೀರ
ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮದುವೆ ಆಮಂತ್ರಣ ಪತ್ರಿಕೆ ಕೊಡಲು ಕಾರಿನಲ್ಲಿ ಸೇಡಂ
ಕಡೆಯಿಂದ ಗುಂಡಗುರ್ತಿ ಕಡೆಗೆ ಹೊರಟಿರುವಾಗ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಮಳಖೇಡ ಪೊಲೀಸ್ ಠಾಣೆಯಲ್ಲಿ
ಎಫ್​ಐಆರ್​ ದಾಖಲಾಗಿದೆ.

Advertisement

Advertisement

Advertisement
