# ವ್ಯಕ್ತಿಯೊಬ್ಬನನ್ನು 100 ಮೀಟರ್​ ದೂರ ಎಳೆದುಕೊಂಡು ಹೋದ ಕಾರು!

- Link: https://hosakannada.com/news/car-accident-video-viral/
- Published: 2022-09-20T10:24:11+00:00
- Author: ನಿಶ್ಮಿತಾ ಎನ್.

ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ವಾಹನ ಸವಾರರ ನಿರ್ಲಕ್ಷವೇ ಕಾರಣವಾಗಿದೆ. ಚಿತ್ರ
ವಿಚಿತ್ರ ರೀತಿಯಲ್ಲಿ ಅಪಘಾತ ಸಂಭವಿಸುತ್ತಿದ್ದು, ಭಯಾನಕವಾಗಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ
ರಸ್ತೆ ಪಕ್ಕ ಪಾರ್ಕ್​ ಮಾಡಿದ್ದ ವಾಹನಗಳಿಗೆ ಸರಣಿ ಅಪಘಾತ ಮಾಡಿದ್ದಲ್ಲದೆ, ವ್ಯಕ್ತಿಯೊಬ್ಬನನ್ನು 
ಕಾರೊಂದು ಎಳೆದುಕೊಂಡು ಹೋದ ಘಟನೆ ನಡೆದಿದೆ.

Sponsored

ಈ ಘಟನೆ ರಾಷ್ಟ್ರ ರಾಜಧಾನಿ ದೆಹಲಿ ಕರೊಲ್​ ಬಾಘ್​ ಏರಿಯಾದಲ್ಲಿ ಸೋಮವಾರ (ಸೆ.19) ರಾತ್ರಿ ಈ ಘಟನೆ
ನಡೆದಿದ್ದು, ಇದಕ್ಕೆ ಸಂಬಂಧಿಸಿದ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟಕ್ಕೂ
ಅದರಲ್ಲಿರುವ ದೃಶ್ಯ ಏನೂ ಎಂಬುದು ಇಲ್ಲಿದೆ ನೋಡಿ..

Advertisement

Advertisement

ಮಹಿಳೆಯೊಬ್ಬಳು ರಸ್ತೆ ಒಂದು ಬದಿಯಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಎಸ್​
ಯುವಿ ಕಾರು ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಪಾರ್ಕ್​ ಮಾಡಿರುವ ವಾಹನಗಳನ್ನು ಡಿಕ್ಕಿ ಹೊಡೆದುಕೊಂಡು
ಮುಂದೆ ಸಾಗುತ್ತದೆ. ಅಲ್ಲದೆ, ಕಾರಿನ ಅಡಿಗೆ ಸಿಲುಕುವ ವ್ಯಕ್ತಿಯೊಬ್ಬನ್ನನು 100 ಮೀಟರ್​ ದೂರ ಎಳೆದುಕೊಂಡು
ಬರುತ್ತದೆ.

ಹಾನಿಗೊಳಗಾದ ಕಾರುಗಳು ಮತ್ತು ದ್ವಿಚಕ್ರ ವಾಹನದ ಅವಶೇಷಗಳನ್ನು ಸಹ ವಿಡಿಯೋದಲ್ಲಿ ಕಾಣಬಹುದು. ಎಸ್‌ಯುವಿ
ಕಾರು ಸದ್ಯ ಪೊಲೀಸರ ವಶದಲ್ಲಿದ್ದು, ಚಾಲಕ ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು
ತನಿಖೆ ಆರಂಭಿಸಿದ್ದಾರೆ. ಈ ಘಟನೆಯನ್ನು ಕಣ್ಣಾರೆ ನೋಡಿದ ಅಲ್ಲಿನ ಜನರು ಶಾಕ್ ಆಗಿಯೇ ನಿಂತಿದ್ದಾರೆ…

Advertisement
