# ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಹೋದ ಉದ್ಯಮಿ ಮಗ ನಾಪತ್ತೆ

- Link: https://hosakannada.com/news/businessmans-son-goes-missing-while-trekking-at-shivagange-hill/
- Published: 2026-08-08T18:08:48+00:00
- Author: ಹೊಸಕನ್ನಡ ನ್ಯೂಸ್

ನೆಲಮಂಗಲ, ಆ.8: ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ತಾಣವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ
ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿದ್ದ 31 ವರ್ಷದ ಉದ್ಯಮಿಯ ಮಗ ನಾಪತ್ತೆಯಾಗಿರುವ
ಘಟನೆ ನಡೆದಿದೆ. ಅದ್ವೈತ್‌ ಉಪಾಧ್ಯಾಯ ನಾಪತ್ತೆಯಾಗಿರುವ ವ್ಯಕ್ತಿ.

Sponsored

ನಿನ್ನೆ ಬೆಳಗ್ಗಿನಿಂದ ಕಾಣೆಯಾಗಿದ್ದು, ಆತನ ಮೊಬೈಲ್‌ ಫೋನ್‌ ಬೇರೊಂದು ಕಡೆ ಸ್ವಿಚ್‌ ಆಫ್‌ ಆಗಿರುವುದು
ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

Advertisement

Advertisement

ಐದು ದಿನಗಳ ಹಿಂದೆ ಅದ್ವೈತ್‌ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಬಾಡಿಗೆಗೆ
ಪಡೆದು ಶಿವಗಂಗೆಗೆ ಬಂದಿದ್ದು, ಬೆಟ್ಟದ ಕೆಳಭಾಗದಲ್ಲಿ ಬೈಕ್‌ ಪಾರ್ಕ್‌ ಮಾಡಿ, ನಿನ್ನೆ ಬೆಳಿಗ್ಗೆ
ಬೆಟ್ಟ ಹತ್ತಿದ್ದ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಆದರೆ ಬೆಟ್ಟ ಹತ್ತಿದ ನಂತರ ವಾಪಸ್‌ 
ಬಂದಿದ್ದಾನೆಯೇ ಅಥವಾ ಇಲ್ಲವೇ ಎಂದು ಸ್ಪಷ್ಟ ಮಾಹಿತಿ ಇಲ್ಲ.

ಬೆಟ್ಟದ ಮೇಲೆ ಇರುವ ಅಪಾಯಕಾರಿ ತಾಣವಾದ ಶಾಂತಲಾ ಡ್ರಾಪ್‌ ಬಳಿ ಯುವಕ ಜಾರಿ ಬಿದ್ದಿರಬಹುದು ಅಥವಾ 
ಎಲ್ಲಾದರೂ ಸಿಲುಕಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಪೊಲೀಸರು ತನಿಖೆ ಚುರುಕು ಮಾಡಿದ್ದಾರೆ.
ಶಾಂತಲಾ ಡ್ರಾಪ್‌ ಪ್ರದೇಶದಲ್ಲಿ ಡ್ರೋನ್‌ ಕ್ಯಾಮೆರಾ ಬಳಸಿ ಶೋಧ ಕಾರ್ಯ ನಡೆಸಲಾಗಿದೆ. ಯುವಕನ ಮೊಬೈಲ್‌
ಲೊಕೇಶನ್‌ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಯಲಿದೆ.

ಅದ್ವೈತ್‌ ಪತ್ನಿ ಪ್ರಾಪ್ತಿ ಅವರು, ನಿನ್ನೆ ಬೆಳಿಗ್ಗೆ 7.30ಕ್ಕೆ ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌
ಹೋಗುವುದಾಗಿ 7.30 ಕ್ಕೆ ತೆರಳಿದ್ದು ನಿನ್ನೆಯಿಂದ ಮೊಬೈಲ್‌ ಸ್ವಿಚ್‌ಆಫ್‌ ಆಗಿದ್ದು, ಈ ಕುರಿತು 
ಕಾಡುಗೋಡಿ ಠಾಣೆಗೆ ದೂರನ್ನು ನೀಡಿದ್ದಾರೆ.

Advertisement
