# MGNREGA Wage Rates Hike: ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರದಿಂದ ದೊಡ್ಡ ಕೊಡುಗೆ, ನರೇಗಾ ವೇತನದಲ್ಲಿ ಬಂಪರ್ ಹೆಚ್ಚಳ

- Link: https://hosakannada.com/news/bumper-hike-in-nrega-wages-is-the-governments-biggest-contribution-ahead-of-the-lok-sabha-elections/
- Published: 2024-03-28T09:52:13+00:00
- Author: ಹೊಸಕನ್ನಡ ನ್ಯೂಸ್

MGNREGA: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (MNREGA) ಅಡಿಯಲ್ಲಿ 
ಕೆಲಸ ಮಾಡುವ ಕಾರ್ಮಿಕರಿಗೆ ಕೇಂದ್ರ ಸರ್ಕಾರ ದೊಡ್ಡ ಕೊಡುಗೆ ನೀಡಿದೆ. MNREGA ವೇತನ ದರವನ್ನು 3 
ರಿಂದ 10 ಪ್ರತಿಶತದಷ್ಟು ಸರಕಾರ ಹೆಚ್ಚಳ ಮಾಡಿದೆ. ಗುರುವಾರ (ಮಾರ್ಚ್ 28) ಇಂದು ಈ ಕುರಿತು ಅಧಿಸೂಚನೆ
ಹೊರಡಿಸಲಾಗಿದೆ.

Sponsored

**ಇದನ್ನೂ ಓದಿ: [KSRTC Driver: ಡ್ರೈವರ್‌ಗಳಿಗೆ ಸಿಹಿ ಸುದ್ದಿ ನೀಡಿದ ಕೆಎಸ್‌ಆರ್‌ಟಿಸಿ](https://hosakannada.com/2024/03/28/ksrtc-has-given-sweet-news-to-the-drivers/)**

Advertisement

Advertisement

[https://twitter.com/ANI/status/1773190725707993473/photo/1?ref_src=twsrc%5Etfw%7Ctwcamp%5Etweetembed%7Ctwterm%5E1773190725707993473%7Ctwgr%5E68eb68cd73419b981d135349efb8dd4fe53fca1c%7Ctwcon%5Es1_&ref_url=https%3A%2F%2Fwww.abplive.com%2Fnews%2Findia%2Fpm-narendra-modi-govt-increase-mgnrega-wage-rates-3-to-10-percent-ahead-2024-lok-sabha-election-265027](https://twitter.com/ANI/status/1773190725707993473/photo/1?ref_src=twsrc%5Etfw%7Ctwcamp%5Etweetembed%7Ctwterm%5E1773190725707993473%7Ctwgr%5E68eb68cd73419b981d135349efb8dd4fe53fca1c%7Ctwcon%5Es1_&ref_url=https%3A%2F%2Fwww.abplive.com%2Fnews%2Findia%2Fpm-narendra-modi-govt-increase-mgnrega-wage-rates-3-to-10-percent-ahead-2024-lok-sabha-election-265027)
8

MNREGA ಕಾರ್ಮಿಕರ ಹೊಸ ವೇತನ ದರಗಳು ಏಪ್ರಿಲ್ 1, 2024 ರಿಂದ ಅನ್ವಯವಾಗುತ್ತವೆ. 2023-24 ಕ್ಕೆ
ಹೋಲಿಸಿದರೆ 2024-25 ರ ವೇತನ ದರವು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕನಿಷ್ಠ 3 ಪ್ರತಿಶತದಷ್ಟು
ಹೆಚ್ಚಾಗಿದೆ. ಗೋವಾದಲ್ಲಿ ವೇತನವನ್ನು ಹೆಚ್ಚಿಸಲಾಗಿದೆ. ಇಲ್ಲಿ MNREGA ವೇತನ ದರಗಳನ್ನು 10.6 ಶೇಕಡಾ
ಹೆಚ್ಚಿಸಲಾಗಿದೆ. ಪಶ್ಚಿಮ ಬಂಗಾಳದಂತಹ ರಾಜ್ಯಗಳಿಂದ ಹಣವನ್ನು ತಡೆಹಿಡಿಯುವ ವಿವಾದದ ಸಮಯದಲ್ಲಿ ಸರ್ಕಾರವು
ದರವನ್ನು ಹೆಚ್ಚಿಸಿದೆ.

**ಇದನ್ನೂ ಓದಿ: [Man entered the Ladies Hostel: ಹುಡುಗಿ ವೇಷದಲ್ಲಿ ಲೇಡಿಸ್‌ ಹಾಸ್ಟೆಲ್‌ಗೆ ನುಗ್ಗಿದ ವಿದ್ಯಾರ್ಥಿ](https://hosakannada.com/2024/03/28/men-disguised-as-a-girl-entered-the-ladies-hostel/)**

ಲೋಕ ಸಭಾ ಚುನಾವಣೆ ಇರುವುದರಿಂದ ಇಡೀ ದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಗ್ರಾಮೀಣಾಭಿವೃದ್ಧಿ
ಸಚಿವಾಲಯವು ಕಾರ್ಮಿಕ ದರಗಳನ್ನು ತಿಳಿಸುವ ಮೊದಲು ಚುನಾವಣಾ ಆಯೋಗದಿಂದ ಅನುಮತಿಯನ್ನು ಕೋರಿತ್ತು. 
ಆಯೋಗದಿಂದ ಹಸಿರು ನಿಶಾನೆ ದೊರೆತ ನಂತರ ಸಚಿವಾಲಯವು ತಕ್ಷಣವೇ ಹೆಚ್ಚಿಸಿದ ವೇತನಕ್ಕೆ ಸಂಬಂಧಿಸಿದಂತೆ
ಅಧಿಸೂಚನೆಯನ್ನು ಹೊರಡಿಸಿದೆ.

Advertisement
