# ನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ಮಂಗಳಮುಖಿಯರಿಂದ ದಾಳಿ | ಬೈಕ್ ನಿಂದಲೇ ಹಿಡಿದೆಳೆದು ಗಾಯಗೊಳಿಸಿದ ತೃತೀಯ ಲಿಂಗಿಗಳು !!

- Link: https://hosakannada.com/news/bullet-prakash-son-and-transgender/
- Published: 2021-09-08T17:09:10+00:00
- Author: ನಿಶ್ಮಿತಾ ಎನ್.

ಸ್ಯಾಂಡಲ್ ವುಡ್ ನ ದಿವಂಗತ ಹಾಸ್ಯ ನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರು ದಾಳಿ ಮಾಡಿರುವ
ಘಟನೆ ಹೆಬ್ಬಾಳದ ಫ್ಲೈ ಓವರ್ ಬಳಿ ನಡೆದಿದೆ.

Sponsored

ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ನಿನ್ನೆ ರಾತ್ರಿ ರಾತ್ರಿ 9 ಗಂಟೆ ವೇಳೆ ಜಿಮ್ ಮುಗಿಸಿ ​​ ಗಾಡಿಯಲ್ಲಿ
ಮನೆಗೆ ವಾಪಸ್ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

Advertisement

Advertisement

ಹೆಬ್ಬಾಳ ಫ್ಲೈಓವರ್ ಬಳಿ ಮಂಗಳಮುಖಿಯರು ತಡೆದ ದಾಳಿ ಮಾಡಿದ್ದಾರೆ ಎನ್ನಲಾಗಿದೆ.ಮಂಗಳಮುಖಿಯರು ರಕ್ಷಕ್
ಬ್ಯಾಗ್ ಹಿಡಿದು ಎಳೆದ ಕಾರಣ ಗಾಡಿಯಿಂದ ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿದ್ದು,ಬೈಕ್​​ಗೂ ಡ್ಯಾಮೇಜ್
ಆಗಿದೆ.

ಈ ವೇಳೆ ಬೈಕ್ ಸ್ಥಳದಲ್ಲೇ ಬಿಟ್ಟು ಹೋಗಿದ್ದ ರಕ್ಷಕ್ ಕೊನೆಗೆ ಹೆಬ್ಬಾಳ ಪೊಲೀಸರ ನೆರವಿನಲ್ಲಿ ಬೈಕ್
ಪಡೆದು ಮನೆಗೆ ತೆರಳಿದ್ದಾರೆ.ಈ ಪ್ರಕರಣ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement
