# ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಮುನ್ನಡೆ

- Link: https://hosakannada.com/news/bjp-takes-a-huge-lead-in-assam/
- Published: 2026-05-04T13:34:51+00:00
- Author: ಹೊಸಕನ್ನಡ ನ್ಯೂಸ್

ಅಸ್ಸಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ
ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವತ್ತ ದಾಪುಗಾಲು ಹಾಕಿದೆ. ಒಟ್ಟು 126 ಕ್ಷೇತ್ರಗಳಿರುವ ಅಸ್ಸಾಂನಲ್ಲಿ
ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದ್ದು, ಮಧ್ಯಾಹ್ನ 11.45 ರ ಸುಮಾರಿಗೆ ಬಿಜೆಪಿ ಬರೋಬ್ಬರಿ 101 
ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಹ್ಯಾಟ್ರಿಕ್‌ ಗೆಲುವಿನ ಮುನ್ಸೂಚನೆಯಲ್ಲಿ ಬಿಜೆಪಿ
ಘಟಕವು ಭಾರೀ ಖುಷಿಯಲ್ಲಿದೆ.

Sponsored

ಈ ಸಂಭ್ರಮವನ್ನು ವ್ಯಕ್ತಪಡಿಸಲು ಅಸ್ಸಾಂ ಬಿಜೆಪಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ವಿಶೇಷ ಎಐ ವಿಡಿಯೋವೊಂದನ್ನು
ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಶಿಗೆ ಹೋಗಿದ್ದ ಸಂದರ್ಭದಲ್ಲಿ ಒಂದು 
ಕೈಯಲ್ಲಿ ಡಮರು ಇನ್ನೊಂದು ಕೈಯಲ್ಲಿ ತ್ರಿಶೂಲ ಹಿಡಿದಿದ್ದ ವಿಡಿಯೋವನ್ನು ಎಐ ಮೂಲಕ ಎಡಿಟ್‌ ಮಾಡಿ 
ಹಂಚಲಾಗಿದೆ.

Advertisement

Advertisement

Advertisement
