# 30 ಬಾಲಕಿಯರನ್ನು ತನ್ನ ಕಾ*ಮ ತೃಷೆಗೆ ಬಳಸಿದ ಬಿಜೆಪಿ ನಾಯಕನ ಪುತ್ರ ಅರೆಸ್ಟ್‌

- Link: https://hosakannada.com/news/bjp-leaders-son-arrested-for-using-30-girls-for-his-sexual-pleasure/
- Published: 2026-03-25T14:48:54+00:00
- Author: ಹೊಸಕನ್ನಡ ನ್ಯೂಸ್

ಗೋವಾ ಮಾ.25: ಕರ್ನಾಟಕದಲ್ಲಿ ಪ್ರಜ್ವಲ್‌ ರೇವಣ್ಣ ಪ್ರಕರಣದ ರೀತಿಯಲ್ಲಿಯೇ ಇದೀಗ ಬಿಜೆಪಿ ಮುಖಂಡನ
ಪುತ್ರನೊಬ್ಬನ ಪ್ರಕರಣವೊಂದು ಬಯಲಾಗಿದೆ. 30 ಅಪ್ರಾಪ್ತ ಬಾಲಕಿಯರನ್ನು ಬಲವಂತದಿಂದ ಕಾಮತೃಷೆಗೆ ಬಳಸಿಕೊಂಡಿದ್ದಾನೆ.
ಈತನೇ ಈ ಕೃತ್ಯದ ವಿಡಿಯೋ ಮಾಡಿ ಬ್ಲಾಕ್‌ಮೇಲ್‌ ಮಾಡುವ ಬೆದರಿಸಿ, ಕಳೆದ ಮೂರು ವರ್ಷದಿಂದ ರಾಜಾರೋಷವಾಗಿ
ತಿರುಗಾಡುತ್ತಿದ್ದ ಕಾಮುಕ ಆರೋಪಿಯನ್ನು ಅರೆಸ್ಟ್‌ ಮಾಡಿದ ಘಟನೆ ಗೋವಾದಲ್ಲಿ ನಡೆದಿದೆ.

Sponsored

ದಕ್ಷಿಣ ಗೋವಾದ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯಕ್ ಪುತ್ರ 20 ವರ್ಷದ ಸೋಹಮ್ ನಾಯಕ್ ಅರೆಸ್ಟ್ ಆಗಿದ್ದಾನೆ.
ಕೆಲ ವಿಡಿಯೋಗಳು ಹೊರಬಂದ ಬೆನ್ನಲ್ಲೇ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇತ್ತ ಪೊಲೀಸರು ತಕ್ಷಣ
ಕಾರ್ಯಪ್ರವೃತ್ತರಾಗಿ ಸೋಹಮ್ ನಾಯಕ್‌ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Advertisement

ಗೆಳೆಯರ ಜೊತೆ ಪಾರ್ಟಿ, ಸುತ್ತಾಟ, ಅಪ್ರಾಪ್ತ ಬಾಲಕಿಯರನ್ನು ಬೆದರಿಸಿ ಕಾಮಕ್ಕೆ ಬಳಸುವುದು ಈತನ ಹವ್ಯಾಸವಾಗಿತ್ತು.
ಕಳೆದ ಮೂರು ವರ್ಷದಿಂದ ಈತ ಇದನ್ನೇ ವೃತ್ತಿಯಾಗಿ ಸ್ವೀಕರಿಸಿದ್ದ. ಕಳೆದ ವಾರ ಮದ್ಯದ ನಶೆಯಲ್ಲಿ ಗೆಳೆಯರಿಗೆ
ತನ್ನ ಕೆಲ ವಿಡಿಯೋಗಳನ್ನು ಫಾರ್ವರ್ಡ್‌ ಮಾಡಿದ್ದ. ಹೀಗೆ ಫಾರ್ವಡ್‌ ಮಾಡಿದ ಬೆನ್ನಲ್ಲೇ ವಿಡಿಯೋಗಳು
ವಾಟ್ಸಪ್‌ನಲ್ಲಿ ಹರಿದಾಡಿದೆ. ಇದು ಸಾರ್ವಜನಿಕ ಆಕ್ರೋಶ ತೀವ್ರವಾಗಿತ್ತು. ಪ್ರತಿಭಟನೆಗಳು ನಡೆದವು.
ಇದೀಗ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಆರೋಪಿಯ ಮೊಬೈಲ್‌ ಫೋನನ್ನು ವಶಪಡಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ತಿಳಿದು
ಬಂದಿದೆ. 25 ರಿಂದ 30 ಅಪ್ರಾಪ್ತ ಬಾಲಕಿಯರನ್ನು ಬಳಸಿರುವುದು ಬಹಿರಂಗವಾಗಿದೆ. ಆರೋಪಿಯ ವಿರುದ್ಧ 
ಫೋಕ್ಸೋ ಕೇಸು ದಾಖಲಾಗಿದೆ.

Advertisement
