# ‘ಇದು ಬಿಹಾರ ರಾಜಧಾನಿ ಪಾಟ್ನಾ ಅಭಿವೃದ್ಧಿ’ ಎಂದು AI ವಿಡಿಯೋ ಹಂಚಿಕೊಂಡು ಸಿಕ್ಕಿಬಿದ್ದ ಬಿಜೆಪಿ!!

- Link: https://hosakannada.com/news/bjp-caught-sharing-ai-video-saying-this-is-the-development-of-bihars-capital-patna/
- Published: 2026-06-05T17:38:08+00:00
- Author: ಹೊಸಕನ್ನಡ ನ್ಯೂಸ್

ಬಹುಶಃ ಸೋಶಿಯಲ್ ಮೀಡಿಯಾವನ್ನು ಉಪಯೋಗಿಸಿಕೊಂಡು ಬಿಜೆಪಿ ಗಿಟ್ಟಿಸಿಕೊಂಡಷ್ಟು ಪ್ರಚಾರವನ್ನು ಬೇರೆ
ಯಾವ ಪಾರ್ಟಿಯು ಗಿಟ್ಟಿಸಿಕೊಂಡಿಲ್ಲ. ಅಲ್ಲದೆ ಸೋಷಿಯಲ್ ಮೀಡಿಯಾದಿಂದ ಬಿಜೆಪಿ ಬೆಳೆದಷ್ಟು ಬೇರೆ ಯಾವ
ಪಕ್ಷವು ಬೆಳೆಯಲಿಲ್ಲ ಎನ್ನಬಹುದು. ಆದರೆ ಇದೀಗ ಈ ಸೋಶಿಯಲ್ ಮೀಡಿಯಾ ಇಟ್ಟುಕೊಂಡು ಜನರಿಗೆ ಚಳ್ಳೆಹಣ್ಣು
ತಿನ್ನಿಸಲು ಮುಂದಾದ ಬಿಜೆಪಿಗೆ ಭಾರೀ ಮುಖಭಂಗವಾದಂತಾಗಿದೆ.

Sponsored

ಬಿಜೆಪಿಯು ಬಿಹಾರ ರಾಜಧಾನಿ ಪಾಟ್ನಾ ಅಭಿವೃದ್ಧಿಯ ಕುರಿತಾದ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೊದಲ್ಲಿ
ಚಂದದ ರಸ್ತೆ, ಅಕ್ಕಪಕ್ಕದಲ್ಲಿ ಸುಂದರ ಲೈಟಿಂಗ್‌ವುಳ್ಳ ರಸ್ತೆ ತಡೆಗೋಡೆಗಳು ಮಿಂಚುತ್ತಿವೆ. ಇಂತಹ
ಸುಸಜ್ಜಿತ ರಸ್ತೆಯಲ್ಲಿ ಕಾರು ಹಾಗೂ ಬೈಕ್‌ಗಳು ಒಂದು ಚೂರು ಅಲುಗಾಡದೇ ಸರಾಗವಾಗಿ ಸಾಗುತ್ತಿವೆ. ಇದನ್ನು
ಹಂಚಿ ಬಿಜೆಪಿ ‘ಅಚ್ಚರಿಯಾಗಬೇಡಿ, ಇದು ಪಾಟ್ನಾ, ಬಿಹಾರದ ರಾಜಧಾನಿ. ಎಲ್ಲಿ ಬಿಜೆಪಿ – ಎನ್‌ಡಿಎ ಸರ್ಕಾರ
ಅಧಿಕಾರದಲ್ಲಿರುತ್ತೋ ಅಲ್ಲಿ ವೇಗದ ಬೆಳವಣಿಗೆ ಇರಲಿದೆ’ ಎಂದು ಬರೆದುಕೊಂಡಿದೆ. ಈ ವಿಡಿಯೋ ಶರವೇಗದಲ್ಲಿ
ವೈರಲ್ ಆಗಿದ್ದು, ಅಷ್ಟೇ ವೇಗವಾಗಿ ಟ್ರೋಲಿಗರ ಬಾಯಿಗೆ ತುತ್ತಾಗಿದೆ. ಅಲ್ಲದೆ ಬಿಜೆಪಿಯ ಮುಖವಾಡ ಕಳಚಿ
ಬಿದ್ದಿದೆ.

Advertisement

Advertisement

ಯಾಕೆಂದರೆ  ಅಸಲಿಯತ್ತಿಗೆ ಇದು ನಿಜವಾದ ವಿಡಿಯೊವಲ್ಲ, ಬದಲಿಗೆ ಎಐನಲ್ಲಿ ರಚಿಸಲಾದ ನಕಲಿ ವಿಡಿಯೊ.
ಆದರೆ ಬಿಜೆಪಿ ಎಲ್ಲಿಯೂ ಇದು ಎಐ ಎಂದು ಉಲ್ಲೇಖಿಸಿಲ್ಲ ಹಾಗೂ ಇದು ಮುಂದಿನ ಯೋಜನೆಯಾ ಎಂಬುದನ್ನೂ ಸಹ
ಬರೆದುಕೊಂಡಿಲ್ಲ. ಬದಲಾಗಿ ಈಗಾಗಲೇ ಬಿಹಾರ ಹೀಗಿದೆ ಎಂದು ಬರೆದುಕೊಂಡು ನಕಲಿ ವಿಡಿಯೊ ಹಾಕಿಕೊಂಡಿದೆ.
ಈ ವಿಡಿಯೊದಲ್ಲಿ ಫ್ಲೈಓವರ್‌ ಮೇಲೆ ಸಾಗುತ್ತಿದ್ದ ಮೂರ್ನಾಲ್ಕು ಬೈಕ್‌ಗಳ ಪೈಕಿ ಒಂದು ಬೈಕ್ ಇದ್ದಕ್ಕಿದ್ದಂತೆ
ಕಾಣೆಯಾಗಿದ್ದು, ಎಐ ಎಂಬುದು ಇದರಿಂದ ಸಾಮಾನ್ಯ ಜನರಿಗೂ ಅರ್ಥವಾಗಿಹೋಗಿದೆ. ಈ ಅಂಶವನ್ನು ಉಲ್ಲೇಖಿಸಿ
ನೆಟ್ಟಿಗರು ಈ ರೀತಿ ನಕಲಿ ವಿಡಿಯೊ ಹಾಕಿ ಜನರ ಕಣ್ಣಿಗೆ ಮಣ್ಣು ಎರೆಚುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ವಿಡಿಯೋ 👇

[https://x.com/i/status/2062491210694947283](https://x.com/i/status/2062491210694947283)

Advertisement
