# ಜನನ-ಮರಣ ನೋಂದಣಿ, ಹೊಸ ನಿಯಮ-ಅ.1 ರಿಂದ ಜಾರಿ

- Link: https://hosakannada.com/news/birth-and-death-registration-new-rules-effective-from-aug-1/
- Published: 2026-09-17T14:03:22+00:00
- Author: ಹೊಸಕನ್ನಡ ನ್ಯೂಸ್

ಜನನ ಮತ್ತು ಮರಣ ನೋಂದಣಿಯನ್ನು ವಿಳಂಬವಾಗಿ ಮಾಡಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸುವ 
ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ-2026 ರ ನೂತನ ನಿಯಮಗಳು ಅ.1 ರಿಂದ ಜಾರಿಗೆ ಬರಲಿದೆ.
ಈ ಕುರಿತು ಭಾರತದ ರಿಜಿಸ್ಟ್ರಾರ್‌ ಜನರಲ್‌ ಮೃತ್ಯುಂಜಯ್‌ ಕುಮಾರ್‌ ನಾರಾಯಣ್‌ ಅವರು ಅಧಿಸೂಚನೆಯನ್ನು
ಹೊರಡಿಸಿದ್ದಾರೆ.

Sponsored

ಜನನ ಅಥವಾ ಮರಣ ಸಂಭವಿಸಿದ ದಿನಾಂಕದಿಂದ ಒಂದು ವರ್ಷದ ನಂತರ ಎರಡು ವರ್ಷ ಪೂರ್ಣಗೊಳ್ಳುವ ಮೊದಲು ನೋಂದಣಿಗೆ
ಅರ್ಜಿ ಸಲ್ಲಿಸಿದರೆ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅಥವಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌
ಅವರ ಆದೇಶ ಬೇಕಾಗಲಿದೆ. ನಿಗದಿತ ಶುಲ್ಕ ಪಾವತಿಗೆ ಇದು ಒಳಪಡಲಿದ್ದು, ನೋಂದಣಿಗೆ ಅನುಮತಿ ನೀಡಲಾಗುತ್ತದೆ.

Advertisement

Advertisement

Advertisement
