# Bhuvaneshwara: ಟೇಬಲ್‌ನಲ್ಲಿ ಕುಳಿತು ಪುರಿ ಜಗನ್ನಾಥ ದೇಗುಲ ಪ್ರಸಾದ ಸೇವನೆ; ವಿಡಿಯೋ ವೈರಲ್‌, ಜನರಿಂದ ಭಾರೀ ಆಕ್ರೋಶ

- Link: https://hosakannada.com/news/bhuvaneshwara-puri-jagannath-temple-prasad-eaten-while-sitting-at-a-table-video-goes-viral-huge-outrage-from-people/
- Published: 2025-05-19T09:11:08+00:00
- Author: ಹೊಸಕನ್ನಡ ನ್ಯೂಸ್

Bhuvaneshwara: ಪುರಿ ಜಗನ್ನಾಥ ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನು ಡೈನಿಂಗ್‌ ಟೇಬಲ್‌ನಲ್ಲಿ
ಕುಳಿತು ಕುಟುಂಬವೊಂದು ಸೇವನೆ ಮಾಡಿದ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಪ್ರಸಾದವನ್ನು ನೆಲದ
ಮೇಲೆ ಕುಳಿತು ಸ್ವೀಕರಿಸಬೇಕು ಎನ್ನುವುದು ಸಾವಿರಾರು ವರ್ಷಗಳ ಸಂಪ್ರದಾಯ.

Sponsored

ಈ ಪ್ರಸಾದ ಸೇವನೆ ಕುರಿತು ವಿಡಿಯೋವೊಂದು ವೈರಲ್‌ ಆಗಿದೆ. ಅರ್ಚಕರೊಬ್ಬರು ಪ್ರಸಾದ ಬಡಿಸುತ್ತಿದ್ದು,
ಹೆಂಗಸರು, ಮಕ್ಕಳು ಸೇರಿ 10ಕ್ಕೂ ಹೆಚ್ಚು ಮಂದಿ ಟೇಬಲ್‌ನಲ್ಲಿ ಕುಳಿತು ಪ್ರಸಾದ ಸೇವನೆ ಮಾಡುತ್ತಿರುವುದು
ವಿಡಿಯೋದಲ್ಲಿ ದಾಖಲಾಗಿದೆ. ಈ ರೀತಿ ಪ್ರಸಾದ ಸೇವಿಸುವುದು ತಪ್ಪು ಎಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬರು
ಹೇಳುವುದು ದಾಖಲಾಗಿದೆ.

Advertisement

Advertisement

ಈ ವಿಡಿಯೋ ವೈರಲ್‌ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Advertisement
