# ಬೆಂಗಳೂರು : ಹೊಸ ಬೈಕ್ ಖರೀದಿಸಿ ಮನೆಗೆ ಹೋಗುವಾಗ ಅಪಘಾತ – ಇಬ್ಬರು ಯುವಕರು ಸಾವು

- Link: https://hosakannada.com/news/bengaluru-two-youths-die-in-accident-while-returning-home-after-buying-a-new-bike/
- Published: 2026-10-09T11:39:33+00:00
- Author: ಹೊಸಕನ್ನಡ ನ್ಯೂಸ್

ಹೊಸ ಬೈಕ್ ಖರೀದಿಸಿ ಸಂತೋಷದಿಂದ ತಮ್ಮ ಊರಿಗೆ ಮರಳುತ್ತಿದ್ದ ಇಬ್ಬರು ಸ್ನೇಹಿತರು ಭೀಕರ ರಸ್ತೆ ಅಪಘಾತದಲ್ಲಿ
ಮೃತಪಟ್ಟ ಘಟನೆ ತೆಲಂಗಾಣದ ಸಂಗಾರೆಡ್ಡಿ ಬಳಿ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ನಡೆದಿದೆ.

Sponsored

ಬೀದರ್ ತಾಲೂಕಿನ ಯರನಳ್ಳಿ ಗ್ರಾಮದ ಸಾಯಿಕಿರಣ ಜೀತಪ್ಪ ಜೋಶಿ (25) ಹಾಗೂ ನಾಗೇಶ್ ಮಾಣಿಪ್ಪ ಅಣ್ಣಾ(
24) ಮೃತಪಟ್ಟ ಯುವಕರು ಎಂದು ಗುರುತಿಸಲಾಗಿದೆ.

Advertisement

Advertisement

ಸಾಯಿಕಿರಣ ಹಾಗೂ ನಾಗೇಶ್ ಬೈಕ್ ಖರೀದಿಸುವ ಉದ್ದೇಶದಿಂದ ಬೆಂಗಳೂರಿಗೆ ತೆರಳಿದ್ದರು. ಬೈಕ್ ಖರೀದಿಸಿದ
ಬಳಿಕ ಅದೇ ಬೈಕ್‌ನಲ್ಲಿ ಬೀದರ್‌ಗೆ ವಾಪಸಾಗುತ್ತಿದ್ದರು. ಈ ವೇಳೆ ತೆಲಂಗಾಣದ ಸಂಗಾರೆಡ್ಡಿ ಸಮೀಪ ರಾಷ್ಟ್ರೀಯ
ಹೆದ್ದಾರಿಯಲ್ಲಿ ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ 
ರಭಸಕ್ಕೆ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Advertisement
