# ಬೆಳ್ತಂಗಡಿ: ಓಡಿಲ್ನಾಳ ಸುಮಂತ್‌ ಕೊಲೆ ಪ್ರಕರಣ: ಗೃಹಸಚಿವರನ್ನು ಭೇಟಿ ಮಾಡಿದ ಪೋಷಕರು

- Link: https://hosakannada.com/news/belthangady-odilnala-sumanth-murder-case-parents-meet-home-minister/
- Published: 2026-02-17T16:15:21+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ: ಫೆ.17 ರಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರವರನ್ನು ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ
ಗ್ರಾಮದ ಸಂಬೋಳ್ಯ ಎಂಬಲ್ಲಿ ಗೇರುಕಟ್ಟೆ ಪ್ರೌಢ ಶಾಲೆಯ ವಿದ್ಯಾರ್ಥಿ ಸುಮಂತ್‌ ನಾಳ ದೇವಸ್ಥಾನಕ್ಕೆ
ಧನುಪೂಜೆಗೆ ಹೋಗುವ ತೋಟದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಪ್ರಕರಣದ ತನಿಖೆಯು ನಿಧಾನಗತಿಯಲ್ಲಿ
ಸಾಗುತ್ತಿದೆ, ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಬಾಲಕನ ಪೋಷಕರು
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಮ್‌ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

Sponsored

ಸಚಿವರು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಯಾದ ಅರುಣ್ ಕುಮಾರ್ ರವರನ್ನು ಮತ್ತು ಪಶ್ಚಿಮ ವಲಯದ ಪಶ್ಚಿಮ
ವಲಯದ ಐಜಿಪಿ ಅಮಿತ್ ಸಿಂಗ್ ರವರಿಂದ ಎಲ್ಲಾ ತನಿಖಾ ವರದಿಯನ್ನು ಕೇಳಿ ತಿಳಿದುಕೊಂಡರು.

Advertisement

Advertisement

ಅರುಣ್ ಕುಮಾರ್ ರವರು ಪ್ರತ್ಯೇಕ ತಂಡ ಇಲ್ಲಿಯವರೆಗೆ ಮಾಡಿರುವ ತನಿಕೆಯ ಪ್ರಗತಿ ಬಗ್ಗೆ ಸಚಿವರಿಗೆ 
ಮಾಹಿತಿ ನೀಡಿದರು. ಮಾನ್ಯ ಸಚಿವರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸುವುದರ ಬಗ್ಗೆ ನಿರ್ದೇಶನವನ್ನು
ನೀಡಿದರು ಮತ್ತು ನೊಂದ ಪೋಷಕರಿಗೆ ಸಾಂತ್ವನ ಕೂಡ ಹೇಳಿದರು. ಈ ಸಂದರ್ಭದಲ್ಲಿ ನಾಳ ದೇವಸ್ಥಾನದ ವ್ಯವಸ್ಥಾಪನಾ
ಸಮಿತಿಯ ಅಧ್ಯಕ್ಷರಾದ ಹರೀಶ್ ಕುಮಾರ್, ದ.ಕ.ಜಿಲ್ಲಾ ಆರೋಗ್ಯರಕ್ಷಾ ಸಮಿತಿ ಸದಸ್ಯರಾದ ಅಬ್ದುಲ್ ಕರೀಮ್
ಗೇರುಕಟ್ಟೆ ಹಾಜರಿದ್ದರು.

Advertisement
