# ಬೆಳ್ತಂಗಡಿ | 25 ಲಕ್ಷ ರೂ. ವೆಚ್ಚದಲ್ಲಿ 246 ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಿದ ಶಾಸಕ ಹರೀಶ್ ಪೂಂಜಾ

- Link: https://hosakannada.com/news/beltangady-aasha-karyatarteyaru-and-phone/
- Published: 2021-08-14T15:38:50+00:00
- Author: ಹೊಸಕನ್ನಡ

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಆಶಾ ಕಾರ್ಯಕರ್ತೆಯರ ಮೊಬೈಲ್ ಫೋನ್ ಸಮಸ್ಯೆಗೆ ಸ್ಪಂದಿಸಿ,
246 ಆಶಾ ಕಾರ್ಯಕರ್ತೆಯರಿಗೆ ಸುಮಾರು 25 ಲಕ್ಷ ವೆಚ್ಚದಲ್ಲಿ ಇಂದು ಮೊಬೈಲ್ ಫೋನ್ ವಿತರಿಸಿದರು.

Sponsored

![](https://hosakannada.com/wp-content/uploads/2021/08/IMG-20210814-WA0072.jpg)

Advertisement

Advertisement

ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಇಲಾಖೆ ಸಂಬಂಧಿತ ಕೆಲಸ ನಿರ್ವಹಿಸುವಾಗ ಮೊಬೈಲ್ ಫೋನಿನ
ಸಮಸ್ಯೆ ಎದುರಿಸುತ್ತಿದ್ದರು.

![](https://hosakannada.com/wp-content/uploads/2021/08/IMG-20210814-WA0073.jpg)

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಧ್ವನಿಯಾದ ಶಾಸಕರು, ಎಲ್ಲಾ ಸಮಸ್ಯೆಗಳಿಗೆ ಪರಿಹಾರ
ಒದಗಿಸುವ ಭರವಸೆ ನೀಡಿದ್ದರು.

ಈಗ 25 ಲಕ್ಷ ವೆಚ್ಚದಲ್ಲಿ 246 ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ನೀಡುವ ಮೂಲಕ ತನ್ನ ಕಾರ್ಯ ಬದ್ಧತೆಯನ್ನು
ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Advertisement
