# ರಸ್ತೆಯಲ್ಲಿ ಬಿದ್ದ ನೋಟನ್ನು ಎತ್ತಿಕೊಳ್ಳೋ ಮುನ್ನಾ ಹುಷಾರ್!!

- Link: https://hosakannada.com/news/be-careful-before-picking-up-a-note-that-has-fallen-on-the-road/
- Published: 2026-07-24T12:07:08+00:00
- Author: ಹೊಸಕನ್ನಡ ನ್ಯೂಸ್

ಸೈಬರ್ ವಂಚಕರು ಹಣವನ್ನು ದೋಚಲು ಇಂದು ನಾನಾ ಮಾರ್ಗಗಳನ್ನು ಹುಡುಕಿಕೊಂಡಿದ್ದರೆ, ಕೆಲವು ಕಳ್ಳ ಕಾಕರು
ಹೊಸ ಪ್ಲಾನ್ ಮಾಡಿ ಜನರ ಬಳಿ ಸುಲಿಗೆಗೆ ಇಳಿದಿದ್ದಾರೆ. ಅಂತಹ ಪ್ಲಾನ್ ಗಳಲ್ಲಿ ರಸ್ತೆಯ ಮೇಲೆ ನೋಟನ್ನು
ಬೀಳಿಸುವುದು ಕೂಡ ಒಂದಾಗಿದೆ. ಅಂದರೆ ನೀವು ಓಡಾಡುವ ರಸ್ತೆಯ ಮೇಲೆ ಯಾವುದಾದರು ನೋಟು ಬಿದ್ದಿದ್ದು,
ಒಂದು ವೇಳೆ ಅದನ್ನು ನೀವು ಎತ್ತಿಕೊಳ್ಳಲು ಹೋದಾಗ ನಿಮ್ಮ ಕಥೆ ಮುಗಿಯಿತು ಎಂದರ್ಥ!!

Sponsored

ಹೌದು, ನೀವು ಓಡಾಡುವ ರಸ್ತೆಯ ಮೇಲೆ ಏನಾದರೂ ನೋಟು ಬಿದ್ದಿದ್ದರೆ ಆಸೆಯಿಂದ ಅದನ್ನು ಮುಟ್ಟಲು ಹೋಗಬೇಡಿ.
ಅಥವಾ ತೆಗೆದುಕೊಳ್ಳಬೇಡಿ. ಏಕೆಂದರೆ ಅದನ್ನು ಮುಟ್ಟಿದರೆ ನಿಮ್ಮ ಬಳಿ ಇರುವ ಚಿನ್ನ, ಒಡವೆ, ಹಣ, ಅಥವಾ
ಬೆಲೆಬಾಳುವ ವಸ್ತುಗಳೆಲ್ಲವೂ ಕೂಡ  ಕಳ್ಳ ಕಾಕರ ಪಾಲಾಗುವುದಂತೂ ಸತ್ಯ. ನೀವು ಮಾಡುವ ಈ ಒಂದು ಸಣ್ಣ
ತಪ್ಪು ದೊಡ್ಡ ಅಪಾಯವನ್ನು ತಂದೊಡ್ಡಬಲ್ಲದು. ಯಾಕೆಂದರೆ ಕಳ್ಳ ಕಾಕರು ಈ ರೀತಿಯ ಹೊಸ ಮಾರ್ಗವನ್ನು 
ಹುಡುಕಿಕೊಂಡು ನಿಮ್ಮನ್ನು ದೋಚಲು ಇದೀಗ ಮುಂದಾಗಿದ್ದಾರೆ. 

Advertisement

Advertisement

ವಿಶೇಷವಾಗಿ ಈ ಸ್ಕ್ಯಾಮ್ ಮಹಿಳೆಯರಿಗಾಗಿ ಲಗ್ಗೆ ಇಟ್ಟಿದ್ದು, ಮಹಿಳೆಯರು ಎಚ್ಚರಿಕೆಯಿಂದ ಇರಬೇಕು.
ಅದರಲ್ಲೂ ಮೈತುಂಬ ಒಡವೆ ಹಾಕಿಕೊಂಡಿರುವ ಹೆಣ್ಣು ಮಕ್ಕಳೇ ಇವರ ಟಾರ್ಗೆಟ್. ನಿರ್ಜನ ಪ್ರದೇಶದಲ್ಲಿ 
ನೋಟಿಗೆ ಪ್ರಜ್ಞೆ ತಪ್ಪಿಸುವ ರಾಸಾಯನಿಕವನ್ನು ಸಿಂಪಡಿಸಿ ಅದನ್ನು ರಸ್ತೆಯ ಮೇಲೆ ಬೀಳಿಸುತ್ತಾರೆ. 
ಅದನ್ನು ಕಂಡ ಮಹಿಳೆಯರು ಅಥವಾ ಯಾರಾದರೂ ನಮ್ಮ ಅದೃಷ್ಟವೆಂದು ಭಾವಿಸಿ ಆ ನೋಟನ್ನು ಎತ್ತಿಕೊಳ್ಳುತ್ತಾರೆ.
ಆಗ ಆ ನೋಟಿನಲ್ಲಿ ಇರುವ ರಾಸಾಯನಿಕ ಅವರ ಮೂಗಿಗೆ ತಾಗಿ ಪ್ರಜ್ಞೆ ತಪ್ಪಿ ಬೀಳುತ್ತಾರೆ. ಆಗ ಪಕ್ಕದಲ್ಲೇ
ನಿಂತಿರುವ ಕಳ್ಳರು ನಿಮ್ಮ ಬಳಿ ಇರುವ ಹಣ, ಮೊಬೈಲ್, ಪರ್ಸ್, ಚಿನ್ನವನ್ನೆಲ್ಲಾ ದೋಚಿಕೊಂಡು ಪಲಾಯ 
ಗಯ್ಯುತ್ತಾರೆ. ಹೀಗಾಗಿ ನಿರ್ಜನ ಪ್ರದೇಶದಲ್ಲಿ ಎಷ್ಟೇ ದೊಡ್ಡ ಮೊತ್ತದ ನೋಟು ಬಿದ್ದಿದ್ದರೂ ಕೂಡ ನೀವು
ಅದನ್ನು ಮುಟ್ಟಲು ಹೋಗಬೇಡಿ. ಮುಟ್ಟಿದರೆ ನಿಮ್ಮ ಕಥೆ ಮುಗಿದಂತೆ.

Advertisement
