# <em>ಬಂಟರ ಸಂಘ ಬಂಟ್ವಾಳ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ ಅಧಿಕಾರ ಸ್ವೀಕಾರ</em>

- Link: https://hosakannada.com/news/bantara-sanga-bantwala/
- Published: 2022-02-20T18:57:35+00:00
- Author: Praveen Chennavara

ಬಂಟರ ಸಂಘ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ ಇಂದು ಅಧಿಕಾರ ಸ್ವೀಕರಿಸಿದರು.

Sponsored

![](https://hosakannada.com/wp-content/uploads/2022/02/IMG-20220220-WA0041.jpg)

Advertisement

Advertisement

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಪ್ರಧಾನ ಕಾರ್ಯದರ್ಶಿ 
ಜಗನ್ನಾಥ ಚೌಟ ಬದಿಗುಡ್ಡೆ,ಉಪಾದ್ಯಕ್ಷ ಡಾ.ಪ್ರಶಾಂತ್ ಮಾರ್ಲ, ಜತೆ ಕಾರ್ಯದರ್ಶಿ ರಂಜನ್ ಶೆಟ್ಟಿ ಅರಳ,
ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ,ಜೊತೆ ಕೋಶಾಧಿಕಾರಿ ಪ್ರತಿಭಾ ರೈ ಉಪಸ್ಥಿತರಿದ್ದರು.

![](https://hosakannada.com/wp-content/uploads/2022/02/IMG-20220220-WA0039.jpg)

ಬಳಿಕ ಮಾತನಾಡಿದ ನೂತನ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿಯವರು ಸಮಾಜದ ಏಳಿಗೆಗೆ ಪ್ರಾಮಾಣಿಕ ಕೆಲಸ ಮಾಡುವುದಲ್ಲದೆ
ಇದೊಂದು ಸ್ಥಾನವಲ್ಲ ಜವಾಬ್ದಾರಿ ಎಂಬುದನ್ನು ಅರಿತು ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗ್ರಿಗುತ್ತು ವಿವೇಕ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.

![](https://hosakannada.com/wp-content/uploads/2022/02/IMG-20220220-WA0040.jpg)

ವೇದಿಕೆಯಲ್ಲಿ ಮಹಿಳಾ ಸಮಿತಿಯ ಆಶಾ ಪಿ ರೈ,ಪದಾದಿಕಾರಿಗಳಾದ ಸುಮಾ ನವೀನ್ ಶೆಟ್ಟಿ, ಜ್ಯೋತಿ ಪಿ ಶೆಟ್ಟಿ,
ಜಗದೀಶ್ ಶೆಟ್ಟಿ ಇರಾ ಉಪಸ್ಥಿತರಿದ್ದರು.ಕಿರಣ್ ಹೆಗ್ಡೆ ಸ್ವಾಗತಿಸಿ,ನವೀನ್ ಶೆಟ್ಟಿ ಮುಂಡಾಜೆಗುತ್ತು
ವರದಿ ವಾಚಿಸಿ,ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

Advertisement
