# Ban on Sale of Liquor: ಎಣ್ಣೆ ಪ್ರಿಯರಿಗೆ ಆಘಾತಕಾರಿ ಸುದ್ದಿ! ರಾಜ್ಯದಲ್ಲಿ ನಾಲ್ಕು ದಿನ ಮದ್ಯ ಮಾರಾಟ ಬಂದ್!!!

- Link: https://hosakannada.com/news/ban-on-sale-of-liquor-for-four-day-in-karnataka/
- Published: 2023-05-04T11:09:22+00:00
- Author: ಕಾವ್ಯ ವಾಣಿ

Ban on Sale of Liquor: ಸದ್ಯ ಕರ್ನಾಟಕ ವಿಧಾನಸಭೆಯಲ್ಲಿ [ಚುನಾವಣೆಯ](https://en.m.wikipedia.org/wiki/Karnataka_Legislative_Assembly)(
election) ಸಿದ್ಧತೆ ಭರದಿಂದ ಸಾಗುತ್ತಿದ್ದು, ಬರುವ ಮೇ ತಿಂಗಳಿನಲ್ಲಿ ನಡೆಯಬೇಕಾಗಿರುವ ಚುನಾವಣೆಯಲ್ಲಿ
ಜನರ ಆಯ್ಕೆ ಯ ಪಾತ್ರವು ಪ್ರಮುಖವಾಗಿದೆ.

Sponsored

ಕರ್ನಾಟಕ ವಿಧಾನಸಭಾ ಚುನಾವಣೆಯು ಮೇ 10 ರಂದು ಬುಧವಾರದಂದು ಮತದಾನ ನಡೆಯಲಿದ್ದು , ಮೇ 13 ರಂದು ಶನಿವಾರ
ಮತ ಎಣಿಕೆ ನಡೆಯಲಿದೆ. ಮತದಾನ ಹಾಗೂ ಮತ ಎಣಿಕೆ ಪ್ರಯುಕ್ತ ರಾಜ್ಯದಾದ್ಯಂತ ನಾಲ್ಕು ದಿನಗಳ ಕಾಲ ಮದ್ಯ
ಮಾರಾಟ ಬಂದ್ (Ban on Sale of Liquor:) ಆಗಲಿದೆ.

Advertisement

Advertisement

ಸದ್ಯ ಮತದಾನ ಹಾಗೂ ಮತ ಎಣಿಕೆ ಪ್ರಯುಕ್ತ ಮೇ 8, 9, 10 ಮತ್ತು 13ರಂದು ಮದ್ಯ ಮಾರಾಟ ಬಂದ್ ಆಗಲಿದೆ,
ಮೇ 8ರಂದು ಬೆಳಗ್ಗೆ 6 ಗಂಟೆಯಿಂದ ಮದ್ಯದಂಗಡಿಗಳು ಬಂದ್ ಆಗಲಿದೆ, ಮೇ 10ರ ಮಧ್ಯರಾತ್ರಿ 12 ಗಂಟೆಯವರೆಗೆ
ಇದು ಮುಂದುವರಿಯಲಿದೆ. ಇನ್ನು ಎಣಿಕೆ ದಿನವಾದ ಮೇ 13 ರಂದು ಅಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ
12 ಗಂಟೆಯವರೆಗೆ ಮದ್ಯದಂಗಡಿಗಳು ಬಂದ್ ಇರಲಿದೆ.

ಈ ಮೇಲಿನ ನಾಲ್ಕು ದಿನಗಳ ಅವಧಿಯಲ್ಲಿ ಮದ್ಯ ದಾಸ್ತಾನು ಮಾಡುವುದಕ್ಕೆ ಕಡಿವಾಣ ಹಾಕಬೇಕು. ಈ ಕುರಿತಂತೆ
ಸಮಗ್ರ ನಿರ್ದೇಶನಗಳನ್ನು ನೀಡಬೇಕು ಎಂದು ಆಯೋಗವು ರಾಜ್ಯ ಸರಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿತ್ತು.
ಅದರಂತೆ ಈಗ ಜಿಲ್ಲಾಧಿಕಾರಿಗಳು ಅಯಾ ಜಿಲ್ಲೆಗಳಲ್ಲಿ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದಾರೆ.

ಒಂದು ವೇಳೆ ಮರು ಮತದಾನ ನಡೆದ ಸಂದರ್ಭದಲ್ಲಿ ಅಲ್ಲಿಯೂ ಸಹ ಈ ಅನ್ವಯ ಆದೇಶವನ್ನು ಮುಂದುವರೆಸುವುದಾಗಿ
ತಿಳಿಸಲಾಗಿದೆ.

ಇದನ್ನೂ ಓದಿ: [ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಚೆಕ್ ಮಾಡೋದು ಹೇಗೆ? ಇಲ್ಲಿದೆ ಉತ್ತರ!](https://hosakannada.com/2023/05/04/karnataka-assembly-election-2023-how-to-check-if-your-name-is-in-the-electoral-roll/)

Advertisement
