# ಬಜಗೋಳಿ: ಆಟೋ ಹಾಗೂ ಕಾರು ನಡುವೆ ಭೀಕರ ಅಪಘಾತ!! ಆಟೋ ಚಾಲಕ ಮೃತ್ಯು-ಇನ್ನೊರ್ವ ಗಂಭೀರ

- Link: https://hosakannada.com/news/bajagoli-car-and-auto-accident/
- Published: 2022-01-26T20:56:44+00:00
- Author: ಹೊಸಕನ್ನಡ ನ್ಯೂಸ್

**ಬಜಗೋಳಿ**: ರಾಷ್ಟೀಯ ಹೆದ್ದಾರಿಯ ಮಿಯ್ಯಾರು ಎಂಬಲ್ಲಿ ಆಟೋ ರಿಕ್ಷಾ ಹಾಗೂ ಕಾರು ನಡುವೆ ಮುಖಾಮುಖಿ
ಡಿಕ್ಕಿ ಸಂಭವಿಸಿ ಓರ್ವ ಮೃತಮಟ್ಟು ಇನ್ನೊರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

Sponsored

ಮೃತರನ್ನು ಆಟೋ ಚಾಲಕ ಚಂದ್ರಶೇಖರ್ ಮಡಿವಾಳ ಎಂದು ಗುರುತಿಸಲಾಗಿದ್ದು,ಗಾಯಗೊಂಡವರನ್ನು ದಿವಾಕರ್ ಮಡಿವಾಳ
ಎಂದು ಗುರುತಿಸಲಾಗಿದೆ.

Advertisement

Advertisement

ಈರ್ವರೂ ಆಟೋ ರಿಕ್ಷಾದಲ್ಲಿ ಕಾರ್ಕಳದ ಆಸ್ಪತ್ರೆಗೆ ತೆರಳಿ ಹಿಂದಿರುಗುತ್ತಿದ್ದಾಗ ನಾರಾವಿ ಕಡೆಯಿಂದ
ಬರುತ್ತಿದ್ದ ಕಾರೊಂದು ಆಟೋ ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ, ಕಾರು ಚಾಲಕ ಸಣ್ಣ ಪುಟ್ಟ
ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
