# ಚರಂಡಿಗೆ ಬಿದ್ದ ಮಗು, ಅಪಾಯದಿಂದ ಪಾರು

- Link: https://hosakannada.com/news/baby-falls-into-the-drain-escapes-danger/
- Published: 2026-10-07T18:29:14+00:00
- Author: ಹೊಸಕನ್ನಡ ನ್ಯೂಸ್

ಸುಳ್ಯ: ಶ್ರೀರಾಮಪೇಟೆಯಲ್ಲಿ ಮುಳಿ ಜ್ಯುವೆಲ್ಲರ್ಸ್‌ ಎದುರು ರಸ್ತೆ ಬದಿ ಜೆಸಿಬಿ ಮೂಲಕ ಕುಡಿಯುವ 
ನೀರಿನ ಪೈಪ್‌ ಕಾಮಗಾರಿ ನಡೆಯುತ್ತಿದ್ದು, ಫುಟ್‌ಪಾತ್‌ನ ಚರಂಡಿ ಫ್ಲ್ಯಾಬ್‌ ತೆರವು ಮಾಡಿದ ಸ್ಥಳಕ್ಕೆ
ನಡೆದುಕೊಂಡು ಬರುತ್ತಿದ್ದ ಮಗು ಬಿದ್ದ ಘಟನೆ ನಡೆದಿದೆ.

Sponsored

ಮಗು ತನ್ನ ಮನೆಯವರ ಜೊತೆ ನಡೆದುಕೊಂಡು ಬರುತ್ತಿದ್ದ ವೇಳೆ ಕಾಮಗಾರಿ ವೀಕ್ಷಿಸುತ್ತಾ ಮುಂದೆ ಬಂದಿದ್ದು,
ಫುಟ್‌ಪಾತ್‌ನ ಸ್ಲಾಬ್‌ ತೆರವುಗೊಳಿಸಿದ್ದ ಚರಂಡಿಯೊಳಗೆ ಬಿದ್ದಿದೆ. ಕೂಡಲೇ ಅಲ್ಲಿದ್ದ ಸ್ಥಳೀಯರು 
ಮಗುವನ್ನು ಚರಂಡಿಯಿಂದ ಮೇಲಕ್ಕೆತ್ತಿದ್ದಾರೆ. ಅದೃಷ್ಟವಶಾತ್‌ ಮಗು ಯಾವುದೇ ಅಪಾಯವಿಲ್ಲದೆ ಪಾರಾಗಿದೆ.

Advertisement

Advertisement

Advertisement
