# Robot: ರೋಬೋಟ್‌ನಿಂದಲೇ ಮಗುವಿನ ಜನನ: ಜಗತ್ತಿನ ಮೊದಲ ಕೃತಕ ಗರ್ಭಧಾರಣೆಗೆ ರೆಡಿಯಾದ ಚೀನಾ!

- Link: https://hosakannada.com/news/baby-born-from-a-robot-china-ready-for-worlds-first-artificial-inseminationrobot/
- Published: 2025-08-20T11:05:22+00:00
- Author: ಹೊಸಕನ್ನಡ ನ್ಯೂಸ್

Robot: ಭವಿಷ್ಯದಲ್ಲಿ ಹೆರಿಗೆಗೆ ಮಹಿಳೆಯರ ಅಗತ್ಯ ಇರಲಿಕ್ಕಿಲ್ಲ. ಯಾಕೆಂದರೆ, ಹ್ಯೂಮನಾಯ್ಡ್ ರೋಬೋಟ್‌ಗಳು(
robot) ಮಾನವ ಮಗುವಿಗೆ ಜನ್ಮ ನೀಡುವ ಸಾಧ್ಯತೆಯಿದೆ ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ.

Sponsored

ಗುವಾಂಗ್‌ಝೌನಲ್ಲಿರುವ ಕೈವಾ ಟೆಕ್ನಾಲಜಿಯ ಡಾ. ಜಾಂಗ್ ಕಿಫೆಂಗ್ ನೇತೃತ್ವದಲ್ಲಿ ಈ ಯೋಜನೆಯು ಕಾರ್ಯರೂಪಕ್ಕೆ
ಬಂದಿದೆ. ಈ ಸಂಶೋಧನೆಯ ಮುಖ್ಯ ಉದ್ದೇಶ ಕೃತಕ ಗರ್ಭದೊಳಗೆ ನೈಸರ್ಗಿಕ ಗರ್ಭಧಾರಣೆಯನ್ನು ಮಾಡೋದು. ರೋಬೋಟ್‌ನ
ದೇಹದೊಳಗೆ ಕೃತಕ ಗರ್ಭದಂತಹ ಜಾಗವನ್ನು ಸೃಷ್ಟಿಸಿ, ಅದರೊಳಗೆ ಭ್ರೂಣವನ್ನು ಇರಿಸಲಾಗುತ್ತದೆ. ಈ ಭ್ರೂಣವು
ಒಂಬತ್ತು ತಿಂಗಳುಗಳ ಕಾಲ ಕೃತಕ ಆಮ್ನಿಯೋಟಿಕ್ ದ್ರವದಿಂದ ತುಂಬಿದ ಪರಿಸರದಲ್ಲಿ ಟ್ಯೂಬ್ ಮೂಲಕ ಪೋಷಕಾಂಶಗಳನ್ನು
ನೀಡಲಾಗುತ್ತೆ.

Advertisement

Advertisement

ಡಾ. ಜಾಂಗ್ ಹೇಳಿರುವ ಪ್ರಕಾರ, ಮುಂದಿನ ವರ್ಷವೇ ಸುಮಾರು ₹12 ಲಕ್ಷಕ್ಕೂ ಅಧಿಕ ಬೆಲೆಯ ಮೂಲ ಮಾದರಿ(
ಪ್ರೋಟೋಟೈಪ್) ಮಾರಾಟಕ್ಕೆ ಬರುವ ಸಾಧ್ಯತೆ ಇದೆ. ಇದು ಗರ್ಭಧಾರಣೆಯಿಂದ ಹಿಡಿದು ಹೆರಿಗೆಯವರೆಗಿನ ಸಂಪೂರ್ಣ
ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪುನರಾವರ್ತಿಸಬಹುದು ಎಂದು ಅವರು ತಿಳಿಸಿದ್ದಾರೆ.

ಸವಾಲುಗಳು ಮತ್ತು ನೈತಿಕ ಚರ್ಚೆಗಳು

ಈ ತಂತ್ರಜ್ಞಾನವು ಚೀನಾದಲ್ಲಿ ಹೆಚ್ಚುತ್ತಿರುವ ಬಂಜೆತನದ ಸಮಸ್ಯೆಗೆ ಪರಿಹಾರ ನೀಡಬಹುದು ಮತ್ತು ಗರ್ಭಧಾರಣೆಯ
ಅಪಾಯಗಳು ಹಾಗೂ ದೈಹಿಕ ಒತ್ತಡದಿಂದ ಮಹಿಳೆಯರನ್ನು ಮುಕ್ತಗೊಳಿಸಬಹುದು ಎಂದು ಹೇಳಲಾಗಿದೆ.

[Ration card: ಅಧಿವೇಶನ ಮುಗಿದ ನಂತರ ಅನರ್ಹ ಪಡಿತರ ಚೀಟಿ ರದ್ದತಿಗೆ ಕ್ರಮ: ಸಚಿವ ಕೆ.ಎಚ್ ಮುನಿಯಪ್ಪ](https://hosakannada.com/2025/08/20/action-to-cancel-ineligible-ration-cards-after-the-session-ends-minister-k-h-muniyappa/)

Advertisement
