# ಪ್ರಧಾನಿ ವಿರುದ್ಧ ನಾಲಿಗೆ ಹರಿಬಿಟ್ಟ ಬಿ ಕೆ ಹರಿಪ್ರಸಾದ್‌; ಏಕವಚನದಲ್ಲೇ ವಾಗ್ದಾಳಿ

- Link: https://hosakannada.com/news/b-k-hariprasad-sticks-his-tongue-out-at-the-prime-minister-one-man-debate-in-the-singular/
- Published: 2026-09-19T19:24:20+00:00
- Author: ಹೊಸಕನ್ನಡ ನ್ಯೂಸ್

ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಏಕವಚನದಲ್ಲೇ
ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಎನ್ನುವ ಪರಿಜ್ಞಾನ ಕೂಡಾ ಇಲ್ಲದೇ ಅವರ ವೈಯಕ್ತಿಕ ವಿಚಾರ ಪ್ರಸ್ತಾಪಿಸಿ
ನಾಲಿಗೆ ಹರಿಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಹರಿಪ್ರಸಾದ್‌ ಅವರು,“
ತ್ರಿಬಲ್‌ ತಲಾಖ್‌ ಇವ್ನಿಗೆ ಯಾಕ್‌ ಬೇಕು? ಮದುವೆಯೇ ಆಗಿಲ್ಲ!” ಎಂದು ಹೇಳಿದ್ದಾರೆ.

Sponsored

ಪ್ರಧಾನಿ ಕುರಿತು ನಾಲಿಗೆ ಹರಿಬಿಟ್ಟ ಹರಿಪ್ರಸಾದ್‌ ವಿರುದ್ಧ ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Advertisement

ನಮ್ಮಲ್ಲಿ ಮಹಾಮಾನವರೊಬ್ಬರು ಪ್ರಧಾನಮಂತ್ರಿ ಆಗಿ ಬಿಟ್ಟಿದ್ದಾರೆ. ಮನ್‌ ಕಿ ಬಾತ್‌ ಅಂತ ಮಾತನಾಡುತ್ತಾರೆ.
12 ವರ್ಷ ಆಯ್ತು, ಧಾರ್ಮಿಕತೆ ಕುರಿತು 12 ನಿಮಿಷ ಮಾತನಾಡಿದ್ದು ನೋಡಿದ್ದೀರಾ ಎಂದು ಬಿಕೆ ಹರಿಪ್ರಸಾದ್‌
ಪ್ರಶ್ನೆ ಮಾಡಿದ್ದಾರೆ.

ಮೋದಿ ಹೆಂಗಸರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ ಅಂತ ಬಿಕೆ ಹರಿಪ್ರಸಾದ್ ಆರೋಪಿಸಿದ್ದಾರೆ. ತ್ರಿಬಲ್
ತಲಾಖ್ ಅಂತೆ… ಇವ್ನಿಗೆ ಮದುವೇನೆ ಆಗಿಲ್ಲ, ಇವ್ನಿಗೆ ಯಾಕೆ ತ್ರಿಬಲ್ ತಲಾಖ್ ಅಂತ ದೇಶದ ಪ್ರಧಾನಿ 
ಬಗ್ಗೆ ಲಘುವಾಗಿ, ಏಕವಚನದಲ್ಲೇ ಬಿಕೆ ಹರಿಪ್ರಸಾದ್ ಮಾತನಾಡಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷರ
ಏಕವಚನದ ಹೇಳಿಕೆಗೆ ಸಾರ್ವಜನಿಕರೂ ಕೂಡ ಆಕ್ರೋಶ ಹೊರಹಾಕಿದ್ದಾರೆ.

Advertisement
