# ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳ ಮೇಲೆ ಹಲ್ಲೆ

- Link: https://hosakannada.com/news/attacking-sadhus-thinking-they-are-child-thieves/
- Published: 2022-10-06T17:13:59+00:00
- Author: ಕೆ. ಎಸ್. ರೂಪಾ

ಇಲ್ಲೊಂದು ಕಡೆ ಸಾಧುಗಳಂತೆ ಉಡುಗೆ ತೊಟ್ಟಿದ್ದ ಮೂವರನ್ನು ಸ್ಥಳೀಯರು ಸೇರಿ ಮಕ್ಕಳ ಕಳ್ಳರೆಂದು ಭಾವಿಸಿ
ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ನಡೆದಿದೆ.ಛತ್ತೀಸ್ ಗಢ ರಾಜ್ಯದ ಲಾಯಿ ಪೊಲೀಸ್ ಠಾಣೆಯ ವ್ಯಾಪ್ತಿಯ
ಖರೊಡಾ ಎಂಬ ನಗರದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದವರು ರಾಜಸ್ಥಾನ ಮೂಲದವರಾಗಿದ್ದಾರೆ.

Sponsored

Advertisement

Advertisement

ದಸರಾ ಹಬ್ಬದ ಪ್ರಯುಕ್ತ ಸಾಧು ರೂಪದ ವೇಶವನ್ನು ಧರಿಸಿ ಅಲ್ಲಿನ ಸ್ಥಳೀಯ ಮಕ್ಕಳೊಂದಿಗೆ ಮುಕ್ತವಾಗಿ
ಮಾತನಾಡುತ್ತಿದ್ದದ್ದನ್ನು ಶಂಕಿಸಿ ಸ್ಥಳೀಯರು ಏಕಾ ಏಕಿ ಬಂದು ಮೂವರಿಗೆ ಥಳಿಸಿದ್ದಾರೆ.

 ಈ ಕುರಿತು ಘಟನೆಗೆ ಸಂಬಂಧಿಸಿ 30 ಮಂದಿಯನ್ನು ಈಗಾಗಲೇ ಪ್ರಶ್ನಿಸಲಾಗಿದೆ ಎಂದು ದುರ್ಗ್ ಜಿಲ್ಲೆಯ
ಎಸ್ಪಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

Advertisement
