# ಇಂದಿರಾ ಗಾಂಧಿ ಹತ್ಯೆ ಅಪರಾಧಿ ಮಗನಿಗೆ ವಿಧಾನಸಭಾ ಟಿಕೆಟ್ ಘೋಷಣೆ!!

- Link: https://hosakannada.com/news/assembly-ticket-announced-for-the-son-of-indira-gandhis-assassin/
- Published: 2026-08-11T08:00:02+00:00
- Author: ಹೊಸಕನ್ನಡ ನ್ಯೂಸ್

2027ರ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಕಾಲಿ ದಳ್‌ ವಾರಿಸ್‌ ಪಂಜಾಬ್‌ ದೇ ತನ್ನ
ಮೊದಲ ಅಭ್ಯರ್ಥಿಯನ್ನ ಘೋಷಿಸಿದ್ದು, ಭಾರೀ ಚರ್ಚೆ ಉಂಟುಮಾಡಿದೆ.

Sponsored

ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ಶಿಕ್ಷೆಗೆ ಗುರಿಯಾಗಿದ್ದ
ಕೆಹರ್‌ ಸಿಂಗ್‌ ಅವರ ಪುತ್ರ ಸತ್ವಂತ್‌ ಸಿಂಗ್‌ ಅವರನ್ನ ಬಸ್ಸಿ ಪಠಾನಾ ವಿಧಾನಸಭಾ ಕ್ಷೇತ್ರದಿಂದ 
ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪಕ್ಷ  ಮುಂದಾಗಿದ್ದು ಈ ಘೋಷಣೆ ಪಂಜಾಬ್‌ನ ರಾಜಕೀಯ ವಲಯದಲ್ಲಿ ಹೊಸ 
ಚರ್ಚೆಗೆ ಕಾರಣವಾಗಿದೆ. 

Advertisement

Advertisement

ಇಂದಿರಾ ಗಾಂಧಿ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಕೆಹರ್‌ ಸಿಂಗ್‌ ದೋಷಿಯಾಗಿದ್ದರು. ಬಳಿಕ ಅವರಿಗೆ
ಮರಣದಂಡನೆ ವಿಧಿಸಲಾಗಿತ್ತು. ಇದೀಗ ಅವರ ಪುತ್ರನಿಗೆ ಚುನಾವಣಾ ಟಿಕೆಟ್‌ ನೀಡಿರುವ ನಿರ್ಧಾರವು ಪಂಜಾಬ್‌ನ
ಪಂಥಿಕ್‌ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

Advertisement
