# ಬಹುಪತ್ನಿತ್ವ ನಿಷೇಧ ಮಸೂದೆ ಮಂಡಿಸಿದ ಸಿಎಂ

- Link: https://hosakannada.com/news/assam-anti-polygamy-bill-prescribes-seven-year-imprisonment-for-offenders/
- Published: 2025-11-26T08:08:58+00:00
- Author: ಹೊಸಕನ್ನಡ ನ್ಯೂಸ್

ಗುವಾಹಟಿ: ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಮಂಡಿಸಿದ್ದಾರೆ. ವಿಪಕ್ಷ
ಕಾಂಗ್ರೆಸ್, ಸಿಪಿಎಂ ಹಾಗೂ ರಾಯ್‌ಜೋರ್ ದಳದ ಶಾಸಕರ ಅನುಪಸ್ಥಿತಿ ಮಧ್ಯೆಯೇ ಈ ಮಸೂದೆ ಮಂಡಿಸಿದ್ದಾರೆ
ಸಿಎಂ. ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಮಂಗಳವಾರ ಅಧಿವೇಶನದ ಮೊದಲ ದಿನವೇ ಮಸೂದೆ ಮಂಡಿಸಿದ್ದು,
ಮಸೂದೆಯ ಮೇಲಿನ ಚರ್ಚೆ ಬಳಿಕ ಅದಕ್ಕೆ ಅಂಗೀಕಾರ ದೊರೆಯಲಿದೆ.

Sponsored

**ಬಹುಪತ್ನಿತ್ವ ಅಪರಾಧ, ಗರಿಷ್ಟ ಶಿಕ್ಷೆಬಹುಪತ್ನಿತ್ವ ಅಪರಾಧವಾಗಿದ್ದು, ಯಾವುದೇ ಧರ್ಮದ ವ್ಯಕ್ತಿ
ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಇನ್ನೊಂದು ಮದುವೆಯಾದರೆ 7 ವರ್ಷ ಶಿಕ್ಷೆ ವಿಧಿಸುವ ಅಧಿಕಾರವನ್ನು
ಈ ಕಾಯ್ದೆ ಮೂಲಕ ನೀಡಲಾಗಿದೆ. ಈಗಾಗಲೇ ಈ ಕಾಯ್ದೆಗೆ ವಿರೋಧ ವ್ಯಕ್ತವಾಗಿದ್ದು ಮಸೂದೆ ಚರ್ಚೆಯ ನಂತರ
ಕಾಯ್ದೆ ಜಾರಿ ಆಗುತ್ತಾ ಅನ್ನುವ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ.

Advertisement

Advertisement

Advertisement
