# Madikeri: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ!

- Link: https://hosakannada.com/news/applications-invited-for-6th-class-admission-under-the-minority-welfare-department/
- Published: 2025-04-30T09:47:37+00:00
- Author: ಕಾವ್ಯ ವಾಣಿ

Madikeri: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ
ಮೌಲಾನಾ ಆಜಾದ್ ಮಾದರಿ ಶಾಲೆಗೆ (ಆಂಗ್ಲ ಮಾಧ್ಯಮ) 6ನೇ ತರಗತಿ ಉಚಿತ ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ
ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Sponsored

ಅರ್ಹ ವಿದ್ಯಾರ್ಥಿಗಳು https://sevasindhuservices.karnataka.gov.in ಆನ್‍ಲೈನ್ ಮೂಲಕ ಅರ್ಜಿ
ಆಹ್ವಾನಿಸಲಾಗಿದೆ.

Advertisement

Advertisement

ಅರ್ಜಿ ಸಲ್ಲಿಸಲು ಮೇ, 10 ಕೊನೆಯ ದಿನವಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶೇ.75 ರಷ್ಟು, ಇತರೆ
ವಿದ್ಯಾರ್ಥಿಗಳು ಶೇ.25 ರಷ್ಟು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಮುಖ್ಯೋಪಾಧ್ಯಾಯರು, 
ಮೌಲಾನಾ ಆಜಾದ್ ಮಾದರಿ ಶಾಲೆ, ಕುಶಾಲನಗರ ತಾಲ್ಲೂಕು, ದೂರವಾಣಿ ಸಂಖ್ಯೆ: 6361802037, ತಾಲ್ಲೂಕು
ಮಾಹಿತಿ ಕೇಂದ್ರ ಸೋಮವಾರಪೇಟೆ ದೂರವಾಣಿ ಸಂಖ್ಯೆ: 8548068519 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ
ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

Advertisement
