# Apple Watch Series 8: ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯವಾಗುತ್ತಿದೆ ಆ್ಯಪಲ್ ವಾಚ್ ಸಿರೀಸ್ 8!! ನಿಮ್ಮ ಊಹೆಗೂ ನಿಲುಕದಷ್ಟು

- Link: https://hosakannada.com/news/apple-watch-series-8/
- Published: 2023-03-09T11:53:00+00:00
- Author: ಕಾವ್ಯ ವಾಣಿ

Apple Watch Series 8: ಇತ್ತೀಚೆಗೆ ಆ್ಯಪಲ್ ವಾಚ್‌ ಹವಾ ಜೋರಾಗಿದೆ. ಬಹುತೇಕ ಜನರು ಆ್ಯಪಲ್ ವಾಚ್‌
ಆಯ್ಕೆ ಮಾಡುತ್ತಾರೆ. ಅದಲ್ಲದೆ ಆ್ಯಪಲ್ ವಾಚ್‌ ಈಗಿನ ಟ್ರೆಂಡ್ ಆಗಿದ್ದು, ಫಿಟ್ನೆಸ್ ಮತ್ತು ಹೆಲ್ತ್
ಟ್ರ್ಯಾಕಿಂಗ್ ನಿಖರವಾಗಿ ಹೇಳುವುದರಿಂದ ಇದು ಉಪಯೋಗಕಾರಿ ಆದುದು. ಇನ್ನು ಆ್ಯಪಲ್ ಕಂಪನಿಯ (company)
ಸ್ಮಾರ್ಟ್‌ಫೋನ್‌ /ಐಫೋನ್‌ (smartphone / iPhone ) ಅಂದರೆ ಹಲವರಿಗೆ ಪಂಚಪ್ರಾಣ.

Sponsored

ಇದೀಗ ಆ್ಯಪಲ್ ವಾಚ್ (Apple Watch) ನೂತನ ಸರಣಿ 8 ಈಗ ಯುನಿಕಾರ್ನ್ ವಿಶೇಷ ಡಿಸ್ಕೌಂಟ್ ಸೇಲ್ (discount
sale ) ಮೂಲಕ ಲಭ್ಯವಾಗುತ್ತಿದೆ. ಹೌದು, ಆ್ಯಪಲ್ ವಾಚ್ ಸಿರೀಸ್ 8 ಮೇಲೆ ₹20,900 ವರೆಗೆ ಆಫರ್ ಕೊಡುಗೆ
ದೊರೆಯುತ್ತಿದೆ.

Advertisement

Advertisement

ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಆ್ಯಪಲ್ ವಾಚ್ ಸಿರೀಸ್ 8ರಲ್ಲಿ(Apple Watch Series
8) 41mm ಮತ್ತು 45mm ಎಂಬ ಎರಡು ಡಯಲ್ ಮಾದರಿಗಳು ಜನಪ್ರಿಯತೆ ಗಳಿಸಿದೆ. ಅದರಲ್ಲಿ ಆರಂಭಿಕ ಆವೃತ್ತಿ
Apple Watch Series 8 ದೇಶದ ಮಾರುಕಟ್ಟೆಯಲ್ಲಿ ₹45,900 ದರ ಹೊಂದಿದೆ.

ಇದೀಗ ನೂತನ ಆ್ಯಪಲ್ ವಾಚ್ ಸಿರೀಸ್ 8 ಈಗ ಯುನಿಕಾರ್ನ್ ಆ್ಯಪಲ್ ಫೆಸ್ಟ್ ಸೇಲ್ ಮೂಲಕ ₹20,900ವರೆಗೆ
ಭರ್ಜರಿ ಡಿಸ್ಕೌಂಟ್ ದೊರೆಯುತ್ತಿದೆ. ಅಲ್ಲದೆ, ಹೊಸ ವಾಚ್ ಖರೀದಿಸುವುದಾದರೆ, ಎಕ್ಸ್​ಚೇಂಜ್, ಕ್ಯಾಶ್​
ಬ್ಯಾಕ್ ಮತ್ತು ಡಿಸ್ಕೌಂಟ್ ಕೊಡುಗೆಗಳ ಮೂಲಕ ₹25,000ಕ್ಕೆ ಲಭ್ಯವಾಗುತ್ತಿದೆ.

ಜೊತೆಗೆ ಎಚ್​ಡಿಎಫ್​ಸಿ (HDFC ) ಕಾರ್ಡ್ ಬಳಕೆಗೆ ₹3,000 ಡಿಸ್ಕೌಂಟ್ ಇದ್ದು ಇಎಂಐ (EMI ) ಆಯ್ಕೆಯನ್ನೂ
ಕಂಪನಿ ಒದಗಿಸಿದೆ. ಅಲ್ಲದೆ, ಹಳೆಯ ಸ್ಮಾರ್ಟ್​ವಾಚ್ ₹13,392 ವರೆಗೆ ಎಕ್ಸ್​ಚೇಂಜ್ ಕೊಡುಗೆ ಲಭ್ಯವಿದ್ದು,
₹2000 ಕ್ಯಾಶಿಫೈ ಬೋನಸ್ ಕೂಡ ಲಭ್ಯವಾಗುತ್ತಿದೆ.

ಇನ್ನು ಯುನಿಕಾರ್ನ್ ಆ್ಯಪಲ್ ಫೆಸ್ಟ್ ಸೇಲ್​ನಲ್ಲಿ ವಾಚ್ ಸಿರೀಸ್ 8 ಮಾತ್ರವಲ್ಲದೆ, ಐಫೋನ್, ಐಪ್ಯಾಡ್
ಸಹಿತ ವಿವಿಧ ಆ್ಯಪಲ್ ಉತ್ಪನ್ನಗಳಿಗೆ ಡಿಸ್ಕೌಂಟ್ ದೊರೆಯುತ್ತಿದೆ.

ಸದ್ಯ ಆ್ಯಪಲ್ ವಾಚ್ ಸಿರೀಸ್ 8, ಡಿಸ್ಕೌಂಟ್
 ಜಿಪಿಎಸ್ ಮತ್ತು ಸೆಲ್ಯೂಲರ್ ಎಂಬ ಎರಡು ಮಾದರಿಗಳಲ್ಲಿ
ಆ್ಯಪಲ್ ವಾಚ್ ಸಿರೀಸ್ 8 ಲಭ್ಯವಿದ್ದು , ಮಿಡ್​ನೈಟ್, ಸಿಲ್ವರ್ ಮತ್ತು ಸ್ಟಾರ್​ಲೈಟ್ ಎಂಬ ಮೂರು 
ಬಣ್ಣಗಳಲ್ಲಿ ಸಿಗಲಿದೆ. ಇದೊಂದು ಆ್ಯಪಲ್ ವಾಚ್ ಮೇಲೆ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಆಗಿದೆ.

Advertisement
