# ಕಾರ್ಕಳ : ತಮ್ಮನ ಮನೆಗೆ ಬೆಂಕಿಯಿಟ್ಟು ಕಾರಿನೊಳಗೆ ಭಸ್ಮವಾದ ಅಣ್ಣ

- Link: https://hosakannada.com/news/an-elder-brother-who-set-his-house-on-fire-and-got-burnt-inside-the-car/
- Published: 2023-01-26T08:44:39+00:00
- Author: ಕೆ. ಎಸ್. ರೂಪಾ

ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯಲ್ಲಿ ಬರ್ಬರ ಕೃತ್ಯ.ತಮ್ಮನ ಮನೆಗೆ ಕೊಳ್ಳಿಯಿಟ್ಟು ತಾನೂ ಭಸ್ಮವಾದ.
ಸಚ್ಚೇರಿಪೇಟೆಯ ಕೃಷ್ಣ ಸಪಳಿಗ ಎಂಬಾತ ತನ್ನ ತಮ್ಮ ಶೇಖರ ಸಪಳಿಗ ಎಂಬವರ ಮನೆಗೆ ತಡರಾತ್ರಿ 3 ಗಂಟೆಗೆ
ಬೆಂಕಿಯಿಟ್ಟು ತನ್ನ ಓಮಿನಿಯಲ್ಲಿ ಕುಳಿತು ಅದಕ್ಕೂ ಬೆಂಕಿ ಹಾಕಿ ತಾನೂ ಸುಟ್ಟು ಭಸ್ಮವಾದ.ಶೇಖರನ ಮನೆಯಲ್ಲಿ
ಕೃಷ್ಣ ಹಾಗೂ ಶೇಖರನ ಮಗಳ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದು ಮೂರು ಗಂಟೆಗೆ ಕೃಷ್ಣ ಈ ಕೃತ್ಯ ಎಸಗಿದ್ದಾನೆ.
ಜಮೀನು ವಿವಾದ ಈ ಘಟನೆಗೆ ಕಾರಣ ಎನ್ನಲಾಗಿತ್ತಿದೆ.ಅಗ್ನಿಶಾಮಕ ದಳದವರ ಸಹಿತ ಕಾರ್ಕಳ ಗ್ರಾಮಾಂತರ ಠಾಣೆಯ
ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Sponsored

Advertisement

Advertisement

Advertisement
