# Arunachal Pradesh: ವೇದಿಕೆ ಕಾರ್ಯಕ್ರಮದಲ್ಲಿ ಕೋಳಿಯನ್ನು ಕತ್ತರಿಸಿ ರಕ್ತ ಕುಡಿದ ಕಲಾವಿದ

- Link: https://hosakannada.com/news/an-artist-who-cut-a-chicken-and-drank-its-blood-during-a-stage-show/
- Published: 2024-11-06T09:39:39+00:00
- Author: ಹೊಸಕನ್ನಡ ನ್ಯೂಸ್

Arunachal Pradesh: ಅರುಣಾಚಲ ಪ್ರದೇಶದಲ್ಲಿ ವೇದಿಕೆ ಕಾರ್ಯಕ್ರಮವೊಂದರಲ್ಲಿ ಕಲಾವಿದರೊಬ್ಬರು ಕೋಳಿಯ
ಕತ್ತು ಕೊಯ್ದು ರಕ್ತ ಕುಡಿದಿರುವ ಘಟನೆ ನಡೆದಿದೆ. ಕೋನ್‌ ವಾಯ್‌ ಸನ್‌ ಎಂಬ ರಂಗಕಲಾವಿದ ಕೋಳಿಯನ್ನು
ಕೊಂದಿದ್ದು, ಅದರ ರಕ್ತ ಕುಡಿದಿದ್ದಾನೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

Sponsored

ಅ.27 ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಕುರಿತು ಇದೀಗ ಪೇಟಾ
ಸಂಘಟನೆ ಪ್ರತಿಭಟನೆಗೆ ಮುಂದಾಗಿರುವ ಕುರಿತು ವರದಿಯಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್‌),
2023 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯ್ದೆ, 1960 ರ ಅಡಿಯಲ್ಲಿ ಕಾನ್‌ವಾಯ್‌ಸನ್‌
ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

Advertisement

Advertisement

ಪ್ರಾಣಿಗಳ ಮೇಲಿನ ಕ್ರೌರ್ಯಕ್ಕಾಗಿ ದಂಡವನ್ನು ಹೆಚ್ಚಿಸಲು ಪಿಸಿಎ ಕಾಯ್ದೆಗೆ ತಿದ್ದುಪಡಿಯನ್ನು ಕೋರಿ
ಪೆಟಾ ಇಂಡಿಯಾ ಭಾರತ ಸರಕಾರಕ್ಕೆ ಪ್ರಸ್ತಾಪನೆ ಕಳುಹಿಸಿರುವುದಾಗಿ ವರದಿಯಾಗಿದೆ.

Advertisement
