# 50 ವರ್ಷಗಳ ಹಳೆಯ ಆಪಲ್‌-1 ಹರಾಜು, ಇದಕ್ಕೆ ಸಿಕ್ಕ ಬೆಲೆ ಎಷ್ಟು ಗೊತ್ತೇ?

- Link: https://hosakannada.com/news/an-apple-1-thats-50-years-old-went-up-for-auction-do-you-know-how-much-it-sold-for/
- Published: 2026-10-21T10:52:26+00:00
- Author: ಹೊಸಕನ್ನಡ ನ್ಯೂಸ್

ತಂತ್ರಜ್ಞಾನ ದಿಗ್ಗಜ ಆಪಲ್ ಕಂಪನಿಯು ತನ್ನ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ವಿಶೇಷ ಸಂದರ್ಭದಲ್ಲೇ,
ಕಂಪನಿಯ ಇತಿಹಾಸಕ್ಕೆ ಸಂಬಂಧಿಸಿದ ಒಂದು ಅಪರೂಪದ ಸಾಧನ ದಾಖಲೆ ಬೆಲೆಗೆ ಮಾರಾಟವಾಗಿದೆ. 1976ರಲ್ಲಿ
ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವೋಜ್ನಿಯಾಕ್ ನಿರ್ಮಿಸಿದ್ದ ಅತಿ ಅಪರೂಪದ ‘Apple-1’ ಕಂಪ್ಯೂಟರ್
ಹರಾಜಿನಲ್ಲಿ ಬರೋಬ್ಬರಿ 1.15 ಮಿಲಿಯನ್ ಅಮೆರಿಕನ್ ಡಾಲರ್‌ಗೆ (ಭಾರತೀಯ ರೂಪಾಯಿಗಳಲ್ಲಿ ಸುಮಾರು ₹
10.9 ಕೋಟಿ) ಮಾರಾಟವಾಗುವ ಮೂಲಕ ಭಾರಿ ಸಂಚಲನ ಮೂಡಿಸಿದೆ.
 ​

Sponsored

‘ಹ್ಯಾಟ್‌ಫೀಲ್ಡ್’ ಎಂದು ಕರೆಯಲ್ಪಡುವ ಈ ಹಳೆಯ ಕಂಪ್ಯೂಟರ್‌ನ ವಿಶೇಷತೆ ಏನೆಂದರೆ, ಇದರ ಮೇಲೆ ಆಪಲ್
ಸಹ-ಸಂಸ್ಥಾಪಕ ಸ್ಟೀವ್ ವೋಜ್ನಿಯಾಕ್ ಅವರ ಸ್ವತಃ ಕೈಯಿಂದ ಮಾಡಿದ ಸಹಿಯಿದೆ. ಅಷ್ಟೇ ಅಲ್ಲದೆ, 1978ರಲ್ಲಿ
ಸ್ಟೀವ್ ಜಾಬ್ಸ್ ಸ್ವತಃ ಬರೆದಿದ್ದ ಐತಿಹಾಸಿಕ ಪತ್ರವೊಂದೂ ಸಹ ಈ ಹರಾಜಿನ ಪ್ಯಾಕೇಜ್‌ನಲ್ಲಿ ಸೇರಿತ್ತು.

Advertisement

Advertisement

​ಈ ಅಪರೂಪದ ಕಲೆಕ್ಟರ್ಸ್ ಐಟಮ್ ಅನ್ನು ಇಬ್ಬರು ಖ್ಯಾತ ಸಂಗ್ರಹಕಾರರ ನಡುವೆ ಸರಿ ಸುಮಾರು 28 ನಿಮಿಷಗಳ
ಕಾಲ ತೀವ್ರ ಹಾಗೂ ರೋಚಕ ಬಿಡ್ಡಿಂಗ್ ಪೈಪೋಟಿ ನಡೆಯಿತು. ಕೊನೆಗೆ ಅತ್ಯಧಿಕ ಬಿಡ್ ಮಾಡಿದವರು ಈ ಐತಿಹಾಸಿಕ
ಯಂತ್ರವನ್ನು ತಮ್ಮದಾಗಿಸಿಕೊಂಡರು.

​ಐದು ದಶಕಗಳ ಹಿಂದೆ (1976) ಗ್ಯಾರೇಜ್‌ನಲ್ಲಿ ಸಣ್ಣದಾಗಿ ಆರಂಭವಾದ ಆಪಲ್ ಕಂಪನಿಯು ಇಂದು ವಿಶ್ವದ
ಅತ್ಯಂತ ಮೌಲ್ಯಯುತ ಸಂಸ್ಥೆಯಾಗಿ ಬೆಳೆದು ನಿಂತಿರುವುದಕ್ಕೆ ಈ ಹರಾಜು ಮತ್ತೊಮ್ಮೆ ಹಳೆಯ ಸುವರ್ಣ ನೆನಪುಗಳನ್ನು
ಮರುಕಳಿಸಿದೆ. ಹಳೆಯ ತಂತ್ರಜ್ಞಾನದ ಗ್ಯಾಜೆಟ್‌ಗಳಿಗೂ ಇತಿಹಾಸದ ಪುಟಗಳಲ್ಲಿ ಎಂತಹ ಅಪಾರ ಮೌಲ್ಯವಿರುತ್ತದೆ
ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

Advertisement
