# ಅಮರನಾಥ ಗುಹೆ ಬಳಿ ಮೇಘ ಸ್ಫೋಟ | 5 ಮಂದಿ ಸಾವು

- Link: https://hosakannada.com/news/amarnatha-temple-srinagara/
- Published: 2022-07-08T19:34:33+00:00
- Author: Mallika

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪ್ರಸಕ್ತ ಸಾಲಿನ ಮುಂಗಾರಿನ ವಿಕೋಪ ಬಿರುಸಾಗಿಯೇ
ಮುಂದುವರಿದಿದೆ.
ಇದರ ಪರಿಣಾಮ ಅಮರನಾಥ್ ಗುಹೆ ಹಠಾತ್ ಮೇಘ ಸ್ಫೋಟ ಸಂಭವಿಸಿದೆ. ಈ ಸ್ಫೋಟಕ್ಕೆ ಬರೋಬ್ಬರಿ 12-13 ಸಾವಿರ
ಜನ ಸಿಲುಕಿರೋ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಗುಹೆ ಬಳಿಯಿರೋ ಟೆಂಟ್‌ಗಳು ಕೂಡ ಕೊಚ್ಚಿ ಹೋಗಿವೆ.

Sponsored

ದಕ್ಷಿಣ ಕಾಶ್ಮೀರದ ಹಿಮಾಲಯ ಪರ್ವತ ಪ್ರದೇಶದಲ್ಲಿರೋ ಪವಿತ್ರ ಅಮರನಾಥ ಗುಹಾ ದೇವಾಲಯದ ಸಮೀಪ ಮೇಘ ಸ್ಫೋಟ
ಉಂಟಾಗಿದೆ. ಈ ಘಟನೆಯಲ್ಲಿ ಇದುವರೆಗೂ ಎರಡು ಮೃತ ದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಐವರು ಮೃತಪಟ್ಟ ಶಂಕೆ ವ್ಯಕ್ತವಾಗಿದೆ.

Advertisement

Advertisement

ಮೇಘಸ್ಫೋಟವು ಸಂಜೆ 5:30 ರ ಸುಮಾರಿಗೆ ಸಂಭವಿಸಿದ್ದು, ಇದರ ಪರಿಣಾಮವಾಗಿ ಗುಹಾ ದೇಗುಲದ ಬಳಿ ಭಾರೀ
ಪ್ರಮಾಣದ ನೀರು ಹೊರಸೂಸಲ್ಪಟ್ಟಿದೆ.
ಇನ್ನು, ಭಾರೀ ಮಳೆಯಿಂದ ಉಂಟಾದ ಮೇಘ ಸ್ಫೋಟದಿಂದ ಪರ್ವತದ ಮೇಲ್ಬಾಗದಿಂದ
ಬಂಡೆಕಲ್ಲುಗಳು ಸಿಡಿದು ನೀರು ನುಗ್ಗಿದೆ.

![](https://hosakannada.com/wp-content/uploads/2022/07/IMG_20220708_193200.jpg)

Advertisement
