# ಅನ್ಯಗ್ರಹ ಜೀವಿ ಏಲಿಯನ್ಸ್‌ ನ್ನು ಕ್ಯಾಚ್ ಹಾಕಲು ನಾಸಾ ಮಾಡಿದೆ ಹೊಸ ಪ್ಲಾನ್ | ಏಲಿಯನ್ಸ್‌ ಆಕರ್ಷಣೆಗೆ ಅಂತರಿಕ್ಷಕ್ಕೆ ನಗ್ನ ಚಿತ್ರ ರವಾನೆ !

- Link: https://hosakannada.com/news/alian-and-naked-photo/
- Published: 2022-05-06T08:06:28+00:00
- Author: ಹೊಸಕನ್ನಡ ನ್ಯೂಸ್

ನ್ಯೂಯಾರ್ಕ್‌: ಅನ್ಯಗ್ರಹ ಜೀವಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 
ನಾಸಾ ಹೊಸ ಪ್ಲಾನ್ ಮಾಡಿದೆ. ಅದು ಮಾನವರ ನಗ್ನ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾಗಿದೆ.

Sponsored

ಮಾನವರ – ಗಂಡು ಮತ್ತು ಹೆಣ್ಣುಗಳ – ಸುಂದರ ನಗ್ನ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಈ ಮೂಲಕ
ಇಲ್ಲಿಯತನಕ ಇರಬಹುದು ಎಂದುಕೊಂಡಿರುವ ಅನ್ಯಗ್ರಹ ಜೀವಿಗಳನ್ನು (ಏಲಿಯನ್ಸ್‌) ಆಕರ್ಷಿಸಿ, ‘ಕ್ಯಾಚ್‘
ಹಾಕೋ ಹೊಸ ಪ್ರಯತ್ನವನ್ನು ನಾಸಾ ನಡೆಸಿದೆ. “ಬೀಕನ್‌ ಇನ್‌ ದ ಗ್ಯಾಲೆಕ್ಸಿ’ ಎಂಬ ಯೋಜನೆಯಡಿ ಈ ಕ್ರಮಕ್ಕೆ
ಚಿಂತನೆ ನಡೆಸಲಾಗಿದೆ.

Advertisement

Advertisement

ಗಣಿತಶಾಸ್ತ್ರ ಸಂಕೇತಗಳನ್ನು ಆಧರಿಸಿದ ಬೈನರಿ ಕೋಡ್‌ ಆಧಾರಿತ ಸಂದೇಶ ಏಲಿಯನ್ಸ್‌ಗೆ ಅರ್ಥವಾಗಬಹುದು
ಎಂಬ ಆಶಾವಾದವನ್ನೂ ನಾಸಾ ವಿಜ್ಞಾನಿಗಳು ಹೊಂದಿದ್ದಾರೆ. ಮನುಷ್ಯರಂತೆ ಏಲಿಯನ್ ಗಳು ಕೂಡ ವಿರುದ್ದ 
ಲಿಂಗಿಯ ಕಡೆ ( ಯಾರಿಗೆ ಗೊತ್ತು- ಸಲಿಂಗಿ ಕೂಡಾ ಇರಬಹುದು !!) ಆಕರ್ಷಿತ ಗೊಳ್ಳ ಬಹುದು. ಆ ಮೂಲಕ 
ಎಲಿಯನ್ ಗಳ ಸಂಪರ್ಕ ಸಾಧಿಸಬಹುದು ಎನ್ನುವುದು ನಾಸಾ ವಿಜ್ಞಾನಿಗಳ ಹೊಚ್ಚ ಹೊಸಾ ಉಪಾಯ !

![](https://hosakannada.com/wp-content/uploads/2022/05/IMG-20220506-WA0008.jpg)

ಈ ಹಿಂದೆ 1972ರಲ್ಲಿ ಕೂಡ “ಪಯೋನಿ­ಯರ್‌ 10′ ಮತ್ತು 1973ರಲ್ಲಿ “ಪಯೋನಿಯರ್‌ 11′ ಯೋಜನೆಗಳ ಮೂಲಕ
ಬಾಹ್ಯಾಕಾಶಕ್ಕೆ ಮಾನವರ ನಗ್ನ ಚಿತ್ರಗಳನ್ನು ಕಳುಹಿಸಲಾಗಿತ್ತು.
ಬಹುಶಃ ಅದು ಏಲಿಯನ್ ಗಳ ಗಮನಕ್ಕೆ
ಬಂದಿಲ್ಲ ಅನ್ನಿಸುತ್ತದೆ.ಈಗ ಕಳಿಸಲು ಉದ್ದೇಶಿಸಿದ ಮಾನವರ ನಗ್ನ ಚಿತ್ರಗಳು ಡಿಜಿಟಲ್ ಮಾದರಿಯಲ್ಲಿದ್ದು,
ಆ ಸಂಕೇತಗಳನ್ನು ಏಲಿಯನ್ ಗಳು ಗ್ರಹಿಸಿ, ನಂತರ ನಮ್ಮನ್ನು ಸಂಪರ್ಕಿಸಲು ಬೇಕಾದ ಇನ್ವಿಟೇಶನ್ ಲಿಂಕ್
ಅನ್ನು ಕೂಡಾ ಅಂತರಿಕ್ಷಕ್ಕೆ ಹರಿಯಬಿಡಲಾಗಿದೆ. ಯಾರಿಗೆ ಗೊತ್ತು : ಈ ಸಿಗ್ನಲ್ ಗಳು ಅದ್ಯಾವುದೋ ರಸಿಕ
ಏಲಿಯನ್ ಗೆ ತಲುಪಿ ಅವು ಗುಂಪು ಗುಂಪಾಗಿ ಭೂಮಿಗೆ ಬಂದು ತಾಂಬೂಲ ವಿನಿಮಯ ಮಾಡಿಕೊಂಡರೂ ಮಾಡಿಯಾವು !
ಆ ಮೂಲಕ ಅತ್ಯಂತ ಅಡ್ವಾನ್ಸ್ ಟೆಕ್ನಾಲಜಿ ಹೊಂದಿದೆ ಎಂದು ನಂಬಲಾಗಿರುವ ಏಲಿಯನ್ ಗಳು ನಮಗೆ ಹೊಸ ಟೆಕ್ನಾಲಜಿ
ಟ್ರಾನ್ಸ್ಫರ್ ಮಾಡಿದರೂ ಅಚ್ಚರಿ ಇಲ್ಲ. ಇದು ಅಮೆರಿಕಾದ ನಾಸಾ ವಿಜ್ಞಾನಿಗಳ ಆಶಾಭಾವನೆ.

Advertisement
