# ಅಕ್ಷಯ ಕಾಲೇಜು- ಸಂಸ್ಕೃತ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

- Link: https://hosakannada.com/news/akshaya-college-inauguration-of-the-annual-activities-of-the-sanskrit-association-2/
- Published: 2026-08-24T13:11:49+00:00
- Author: ಹೊಸಕನ್ನಡ ನ್ಯೂಸ್

ಪುತ್ತೂರು: ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ಗಳ ಪದವಿ ಕಾಲೇಜಿನಲ್ಲಿ ವಾಗ್ವೈಭವ ಸಂಸ್ಕೃತ ಸಂಘ ದ ವಾರ್ಷಿಕ
ಚಟುವಟಿಕೆಗಳ ಮತ್ತು ಶ್ರೀ ಸುರಸರಸ್ವತೀ ಸಭಾದ ಸಂಸ್ಕೃತ ಪ್ರಥಮಾ ತರಗತಿಯ ಉದ್ಘಾಟನಾ ಸಮಾರಂಭವು ಐಕ್ಯೂಎಸಿ
ಸಹಯೋಗದಲ್ಲಿ ಇಂದು ಕಾಲೇಜಿನ ಅಕ್ಷಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರಿನ ಶ್ರೀ 
ಶಾರದಾ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಶ್ರೀ ರಮೇಶ ಆಚಾರ್ಯರು ಉದ್ಘಾಟಿಸಿ , “ಸಂಸ್ಕೃತ
ಎನ್ನುವುದು ಕೇವಲ ಒಂದು ಭಾಷೆಯಲ್ಲ. ವೇದ, ಉಪನಿಷತ್ತು , ಯೋಗ , ವಿಜ್ಞಾನ , ಸಾಹಿತ್ಯ , ಸುಭಾಷಿತಗಳ
ಸಮೃದ್ಧ ಜ್ಞಾನವು ಅಂತರ್ಗತವಾದ ಭಾರತದ ಜ್ಞಾನ ಭಂಡಾರದ ಕೀಲಿಕೈ. ‘ ಸಂಸ್ಕೃತಿಃ ಸಂಸ್ಕೃತಾಶ್ರಿತಃ ‘
ಎನ್ನುವ ನುಡಿಯಂತೆ ಭಾರತದ ಸನಾತನ ಸಂಸ್ಕೃತಿಯನ್ನು ಅರಿಯಲು ಎಲ್ಲರೂ ಸಂಸ್ಕೃತವನ್ನು ಕಲಿತು , ಪ್ರಾಚೀನ
ಭಾಷೆಯನ್ನು ಉಳಿಸಿ ಬೆಳೆಸಬೇಕು ” ಎಂದು ಶುಭಹಾರೈಸಿದರು. 
 ಅಕ್ಷಯ ಕಾಲೇಜಿನ ಪ್ರಾಂಶುಪಾಲರಾದ ಶ್ರೀ
ಸಂಪತ್ .ಕೆ. ಪಕ್ಕಳ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಅಕ್ಷಯ ಕಾಲೇಜು ಸಂಸ್ಕೃತ ಭಾಷೆಗೆ ಸದಾ ಗೌರವ, 
ಪ್ರೋತ್ಸಾಹವನ್ನು ನೀಡುತ್ತದೆ. ಸಂಸ್ಕೃತ ಪ್ರಥಮ ತರಗತಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು
ಸೇರುವುದರ ಮೂಲಕ ಸಂಸ್ಕೃತ ಕಲಿಕೆಯ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು. ಸಂಸ್ಕೃತ
ವಿಭಾಗ ಪ್ರಮುಖರಾದ ಶ್ರೀಮತಿ ಸಾಯಿಕೃಪಾ. ಕೆ. ಪ್ರಾಸ್ತಾವಿಕ ನುಡಿಯನ್ನಾಡಿದರು. ಅಕ್ಷಯ ಸಮೂಹ ಶಿಕ್ಷಣ
ಸಂಸ್ಥೆಗಳ ಆಡಳಿತಾಧಿಕಾರಿ ಶ್ರೀ ಅರ್ಪಿತ್ .ಟಿ. ಎ. ಮತ್ತು ಐಕ್ಯೂಎಸಿ ಸಂಯೋಜಕಿ ಶ್ರೀಮತಿ ರಶ್ಮಿ .
ಕೆ. ಉಪಸ್ಥಿತರಿದ್ದರು.  ದ್ವಿತೀಯ ವಾಣಿಜ್ಯ ವಿಭಾಗದ ಕು. ಯಶಸ್ವಿ .ಬಿ.ಕೆ. ಮತ್ತು ರಶ್ಮಿ ರಾವ್ 
ಪ್ರಾರ್ಥಿಸಿ, ಸಂಸ್ಕೃತ ಸಂಘದ ಕಾರ್ಯದರ್ಶಿ ಕು.ಶ್ರೇಯಾ ಸ್ವಾಗತಿಸಿ , ಕು. ದೀಕ್ಷಾ ವಂದಿಸಿದ ಈ ಕಾರ್ಯಕ್ರಮವನ್ನು
ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಹಾಗೂ ಸಂಸ್ಕೃತ ಸಂಘದ ಸಂಯೋಜಕಿ ಶ್ರೀಮತಿ ಶಶಿಕಲಾ. ಎಸ್. ನಿರೂಪಿಸಿದರು.

Sponsored

Advertisement

Advertisement

Advertisement
