# Mangaluru: ಮಂಗಳೂರು ಕಾರಾಗೃಹದಲ್ಲಿ ಮತ್ತೆ ಮಾರಾಮಾರಿ – ಕ್ಷುಲ್ಲಕ ವಿಚಾರಕ್ಕೆ ಹೊಡೆದಾಡಿಕೊಂಡ ಕೈದಿಗಳು!

- Link: https://hosakannada.com/news/again-fight-in-mangaluru-jail-prisoners-fight-over-a-trivial-matter/
- Published: 2025-05-20T17:36:07+00:00
- Author: ಕಾವ್ಯ ವಾಣಿ

Mangaluru: ಮಂಗಳೂರಿನ (Mangaluru) ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಕೈದಿಗಳ ನಡುವೆ ಗಲಾಟೆ ನಡೆದಿದೆ.
ನಿನ್ನೆಯಷ್ಟೇ ಸ ಕೈದಿಗಳ ಗ್ಯಾಂಗ್‌ ವಾರ್ ನಡೆದಿತ್ತು. ಇಂದು ಮತ್ತೆ ಇಬ್ಬರು ಕೈದಿಗಳ ನಡುವೆ ಮಾರಾಮಾರಿ
ನಡೆದಿದೆ.

Sponsored

ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದ ಅಡುಗೆ ಕೋಣೆಯಲ್ಲಿ ಹಿಂದೂ ಕೈದಿಯ ಮೇಲೆ ಮುನೀರ್ ಎಂಬ ಕೈದಿ
ಹಲ್ಲೆ ನಡೆಸಿದ್ದು, ಪರಿಣಾಮ ಇಡೀ ಕರಾಗೃಹ ರಣಾಂಗಣವಾಗಿ ಮಾರ್ಪಾಡಾಗಿದೆ. ಕ್ಷಣಮಾತ್ರದಲ್ಲೇ ಈ ಉಳಿದ
ಕೈದಿಗಳ ಗುಂಪು ಕೂಡ ಹಲ್ಲೆಗೆ ಮುಂದಾಗಿದೆ. ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಜೈಲಧಿಕಾರಿಗಳು ಬಡಿದಾಟದಲ್ಲಿ
ತೊಡಗಿದ್ದ ಎರಡೂ ಕೈದಿಗಳ ಗುಂಪನ್ನು ಬೇರ್ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಬರ್ಕೆ ಪೊಲೀಸರು
ಸ್ಥಳಕ್ಕೆ ಭೇಟಿ ನೀತಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

Advertisement

Advertisement

Advertisement
