# ಶ್ರೀದೇವಿಯ ಸಿನಿಮಾ 6000 ಥಿಯೇಟರ್‌ನಲ್ಲಿ ಬಿಡುಗಡೆಗೊಳ್ಳಲಿದೆ ಈ ದಿನಾಂಕದಂದು ! ಕಾರಣ ಇಲ್ಲಿದೆ

- Link: https://hosakannada.com/news/actress-sridevi-death-anniversary-english-vinglish-movie-will-release-in-china/
- Published: 2023-02-07T17:02:01+00:00
- Author: ವಿದ್ಯಾ ಗೌಡ

ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಜನರ ಮೆಚ್ಚುಗೆ ಗಳಿಸಿ, ಟಾಲಿವುಡ್​, ಕಾಲಿವುಡ್​ ಹಾಗೂ ಬಾಲಿವುಡ್​
ನಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟಿ ಶ್ರೀದೇವಿ. ನಟಿಯು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದು,
ಅಭಿಮಾನಿಗಳಿಗೆ ಬೇಸರ ಉಂಟಾಗಿತ್ತು. ಇದೀಗ ನಟಿಯನ್ನು ವಿಶೇಷ, ವಿಭಿನ್ನ ರೀತಿಯಲ್ಲಿ ಅಭಿಮಾನಿಗಳು 
ನೆನಪಿಸಿಕೊಳ್ಳುತ್ತಿದ್ದಾರೆ.

Sponsored

ಫೆಬ್ರವರಿ 24ರಂದು ನಟಿ ಶ್ರೀದೇವಿ ಅವರ ಪುಣ್ಯತಿಥಿ. ಈ ಕಾರಣಕ್ಕೆ ಅವರ ನಟನೆಯ ‘ಇಂಗ್ಲಿಷ್ ವಿಂಗ್ಲಿಷ್​’
ಸಿನಿಮಾ ಚೀನಾದಲ್ಲಿ 6000 ಥಿಯೇಟರ್​ನಲ್ಲಿ ಬಿಡುಗಡೆಗೊಳ್ಳಲಿದೆ. ಗೌರಿ ಶಿಂದೆ ನಿರ್ದೇಶನದ ಈ ಚಿತ್ರ
ಭಾರೀ ಮೆಚ್ಚುಗೆ ಗಳಿಸಿದ್ದು, ಇದೀಗ ನಟಿಯ ನೆನಪಿಗಾಗಿ ಪುಣ್ಯತಿಥಿಯಂದು ಆಕೆಯ ಸಿನಿಮಾ ರಿಲೀಸ್ ಆಗುತ್ತಿದೆ.

Advertisement

Advertisement

ಸಿನಿಮಾದಲ್ಲಿ ಶಶಿ ಹೆಸರಿನ ಪಾತ್ರಕ್ಕೆ ಶ್ರೀದೇವಿ ಅವರು ಅದ್ಭುತವಾಗಿ ಬಣ್ಣ ಹಚ್ಚಿದ್ದಾರೆ. ಗೃಹಿಣಿಯ
ಪಾತ್ರವನ್ನು ಮಾಡಿರುವ ನಟಿ, ಇಂಗ್ಲೀಷ್ ಬಾರದ ಈಕೆ ಎಲ್ಲಾ ಚುಚ್ಚು ಮಾತುಗಳನ್ನು ಕೇಳಿಸಿಕೊಂಡು, ಕೊನೆಗೆ
ಇಂಗ್ಲೀಷ್ ಕಲಿತು ನಿರರ್ಗಳವಾಗಿ ಮಾತನಾಡುತ್ತಾಳೆ. ಚಿತ್ರದ ಅರ್ಥಪೂರ್ಣ ಸಂದೇಶಕ್ಕೆ ಎಲ್ಲರೂ ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ. ಮನೆಯ ಹೆಂಡತಿ ಅಡುಗೆ ಕೋಣೆಗೆ ಮಾತ್ರ ಸೀಮಿತವಾಗದೆ, ತಾನು ಛಲ ತೊಟ್ಟರೆ ಎಲ್ಲವೂ
ಸಾಧ್ಯ, ಅಸಾಧ್ಯ ಯಾವುದೂ ಇಲ್ಲ ಎಂಬುದನ್ನು ಈ ಸಿನಿಮಾ ಸಾರಿ ಹೇಳುತ್ತದೆ. ಸೂಪರ್ ಹಿಟ್ ಸಿನಿಮಾಗಳನ್ನು
ನೀಡಿ, ಬಾರದ ಲೋಕಕ್ಕೆ ಹೋರಟು ಹೋದರು ನಟಿ, ಇದಂತು ಅಭಿಮಾನಿಗಳಿಗೆ ಅತಿ ದುಃಖದ ಸಂಗತಿಯಾಗಿದೆ.

2018 ಫೆಬ್ರವರಿ 20ರಂದು ಶ್ರೀದೇವಿ ಅವರು ಮದುವೆಯ ನಿಮಿತ್ತ ಕುಟುಂಬ ಸಮೇತ ದುಬೈಗೆ ತೆರಳಿದ್ದರು.
ಆದರೆ ದುಬೈಗೆ ಸಂಬಂಧಿಕರ ಮದುವೆಗೆಂದು ಹೋಗಿದ್ದ ಶ್ರೀದೇವಿ, ಅಲ್ಲಿ ಉಳಿದುಕೊಂಡಿದ್ದ ಹೋಟೆಲ್​ ರೂಮ್​
ನ ಸ್ನಾನದ ಕೋಣೆಯಲ್ಲಿರುವ ಬಾತ್​ಟಬ್​ನಲ್ಲಿ ಮುಳುಗಿ ಮೃತಪಟ್ಟರು. ಈ ವಿಚಾರ ಎಲ್ಲರಿಗೂ ಆಘಾತ ಉಂಟುಮಾಡಿತ್ತು.
ಅಭಿಮಾನಿಗಳಿಗೆ, ಸಿನಿಮಾರಂಗಕ್ಕೆ ಬಹುದೊಡ್ಡ ಶಾಕ್ ಆಗಿತ್ತು. ಇದೀಗ ಶ್ರೀದೇವಿ ಅವರ ಐದನೇ ಪುಣ್ಯತಿಥಿ
ಹಿನ್ನೆಲೆಯಲ್ಲಿ ಚೀನಾದಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾ 6000 ಥಿಯೇಟರ್‌ನಲ್ಲಿ ರಿಲೀಸ್ ಮಾಡಲಾಗುತ್ತಿದೆ.

Advertisement
