# ಭೀಕರ ರಸ್ತೆ ಅಪಘಾತ| ಸಂಸದರ ಪುತ್ರ ಸಾವು!

- Link: https://hosakannada.com/news/accident-man-death/
- Published: 2022-03-11T13:21:18+00:00
- Author: ಹೊಸಕನ್ನಡ ನ್ಯೂಸ್

ಚೆನ್ನೈ : ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ ( ಡಿಎಂಕೆ) ರಾಜ್ಯಸಭಾ ಸಂಸದ ಎನ್ ಆರ್ ಇಳಂಗೋವನ್
ಅವರ ಪುತ್ರ ರಾಕೇಶ್ ( 22) ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

Sponsored

ಮತ್ತೋರ್ವ ಪ್ರಯಾಣಿಕನೊಂದಿಗೆ ಪುದುಚೇರಿಯಿಂದ ಚೆನ್ನೈ ಗೆ ರಾಕೇಶ್ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ
ಸಂಭವಿಸಿದೆ. ಕಾರು ರಸ್ತೆ ವಿಭಜಗಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ರಾಕೇಶ್
ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

Advertisement

Advertisement

ಇನ್ನೋರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದಾರೆ.

Advertisement
