# ಅಪಘಾತ ಸ್ಥಳಕ್ಕೆ ತೆರಳಿದ್ದ ಅಂಬ್ಯುಲೆನ್ಸ್ ಚಾಲಕನಿಗೆ ಹಲ್ಲೆಗೆ ಯತ್ನ | ದೂರು ದಾಖಲು

- Link: https://hosakannada.com/news/accident-ambulance-news/
- Published: 2021-09-23T22:09:43+00:00
- Author: Praveen Chennavara

ನೆಲ್ಯಾಡಿ : ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಿಮಿತ್ತ
ಬಂದ ಅಂಬ್ಯುಲೆನ್ಸ್ ನ ಕೀ ಕಿತ್ತುಕೊಂಡು ಚಾಲಕನಿಗೆ ಹಲ್ಲೆ ನಡೆಸಲು ಮುಂದಾದ ಘಟನೆ ಉದನೆಯಿಂದ ವರದಿಯಾಗಿದೆ.

Sponsored

ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ
ಉದನೆ ಸಮೀಪ ಹೊಳೆ ಬದಿಗೆ ಉರುಳಿ ಬಿದ್ದಿತ್ತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಈ ವೇಳೆ ರಕ್ಷಣಾ
ಕಾರ್ಯಾಚರಣೆಗೆಂದು ಅಂಬ್ಯುಲೆನ್ಸ್ ಬಂದಿದ್ದು, ಸ್ಥಳೀಯ ನಿವಾಸಿ ಲಿಬಿನ್ ಎಂಬಾತ ಅಂಬ್ಯುಲೆನ್ಸ್ ವಾಹನದ
ಕೀಯನ್ನು ಕಸಿದುಕೊಂಡು ಹಲ್ಲೆ ನಡೆಸಲು ಯತ್ನಿಸಿರುವುದಾಗಿ ಅಂಬ್ಯುಲೆನ್ಸ್ ಚಾಲಕ ನವಾಝ್ ಧರ್ಮಸ್ಥಳ
ಠಾಣೆಗೆ ದೂರು ನೀಡಿದ್ದಾರೆ.

Advertisement

Advertisement

Advertisement
