# Adhar Card Update: ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಸಮಯ ಮತ್ತೆ ಮುಂದೂಡಿಕೆ –   ಸೆಪ್ಟೆಂಬರ್ 14ರ ವರೆಗೆ ಅವಕಾಶ

- Link: https://hosakannada.com/news/aadhar-card-update-deadline-for-free-aadhaar-update-extended-again-till-september-14/
- Published: 2024-06-14T17:50:26+00:00
- Author: ಹೊಸಕನ್ನಡ ನ್ಯೂಸ್

**Aadhar Card Update** ಮಾಡಬೇಕೆಂದು ಸರ್ಕಾರವು ಹಲವು ತಿಂಗಳಿಂದ ಹೇಳುತ್ತಿದೆ. ಕೆಲವರು ಮಾಡಿದೆ
ಇನ್ನು ಕೆಲವರು ಅಪ್ಡೇಟ್ ಮಾಡದೆ ಉದಾಸೀನ ತೋರುತ್ತಿದ್ದಾರೆ. ಹೀಗಾಗಿ ಉಚಿತವಾಗಿ ಆಧಾರ್ ಅಪ್ಡೇಟ್ 
ಮಾಡಲು ಸರ್ಕಾರ ಜೂನ್ 14ರವರೆಗೆ ಇದ್ದ ಗಡುವನ್ನು ಯುಐಡಿಎಐ ಸೆಪ್ಟಂಬರ್ 14ರವರೆಗೂ ವಿಸ್ತರಿಸಿದೆ.
ಆ ಬಳಿಕವೂ ಆಧಾರ್ ಅಪ್​ಡೇಟ್ ಮಾಡಬಹುದಾದರೂ 50 ರೂ ಶುಲ್ಕ ಪಾವತಿಸಬೇಕಾಗುತ್ತದೆ

Sponsored

[BS Yediyurappa: ಬಿಎಸ್‌ ಯಡಿಯೂರಪ್ಪ ಬಂಧಿಸದಂತೆ ಹೈಕೋರ್ಟ್‌ ಆದೇಶ](https://hosakannada.com/2024/06/14/high-court-orders-not-to-arrest-bs-yediyurappa/)

Advertisement

Advertisement

ಹೌದು, ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್(Adhar card Update)ಮಾಡಲು ನೀಡಿದ್ದ ಗಡುವನ್ನು
ಸೆಪ್ಟೆಂಬರ್ 14ರ ತನಕ ವಿಸ್ತರಿಸಿದೆ. ಮೈ ಆಧಾರ್ ಪೋರ್ಟಲ್ ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್
ಮಾಡಲು ನೀಡಿದ್ದ ಗಡುವನ್ನು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಈಗ ಮತ್ತೊಮ್ಮೆ ವಿಸ್ತರಿಸಾಗಿದೆ
ಎಂದು ತಿಳಿಸಿದೆ. ಅಂದಹಾಗೆ ಈ ರೀತಿ ಸಮಯ ವಿಸ್ತರಿಸುವುದು ಇದು ಎರಡನೇ ಸಲವಾಗಿದೆ.

**ಯಾರು ಅಪ್ಡೇಟ್ ಮಾಡಬೇಕು? ಏನೆಲ್ಲಾ ಮಾಡಬೇಕು?**
 * ಕಳೆದ 10 ವರ್ಷಗಳಲ್ಲಿ ಆಧಾರ್ ಕಾರ್ಡ್ ಅಪ್ಡೇಟ್
ಮಾಡದವರು ಆದಷ್ಟು ಬೇಗ ಈ ಕೆಲಸ ಮಾಡುವಂತೆ ಯುಐಡಿಎಐ ಆಗಾಗ ಜನರನ್ನು ಒತ್ತಾಯಿಸುತ್ತಿದೆ. * ಆಧಾರ್
ಕಾರ್ಡ್ ನಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ಇತರ ಮಾಹಿತಿಗಳನ್ನು ಅಪ್ಡೇಟ್ ಮಾಡೋದು ಕಡ್ಡಾಯ. ಅಂದ
ಹಾಗೇ ಈ ಸೌಲಭ್ಯ ಮೈ ಆಧಾರ್ ಪೋರ್ಟಲ್ ನಲ್ಲಿ ಮಾತ್ರ ಲಭ್ಯವಿದೆ.

ಆನ್​ಲೈನ್​ನಲ್ಲಿ ಏನೆಲ್ಲಾ ಆಧಾರ್ ಅಪ್​ಡೇಟ್ ಮಾಡಬಹುದು?
 ಯುಐಡಿಎಐನ ಆಧಾರ್ ಪೋರ್ಟಲ್​ನಲ್ಲಿ ವಿವಿಧ
ಸೇವೆಗಳನ್ನು ಒದಗಿಸಲಾಗುತ್ತದೆ. ಬಯೋಮೆಟ್ರಿಲ್ ಲಾಕ್ ಮಾಡುವುದು, ಅನ್​ಲಾಕ್ ಮಾಡುವುದು ಇತ್ಯಾದಿಯೂ
ಅದರಲ್ಲಿ ಇದೆ. ಹಾಗೆಯೇ, ಆಧಾರ್ ಕಾರ್ಡ್​ನಲ್ಲಿರುವ ಕೆಲ ಮಾಹಿತಿಯನ್ನು ಅಗತ್ಯಬಿದ್ದಲ್ಲಿ ಬದಲಿಸಬಹುದು.
ಹೆಸರು, ವಿಳಾಸ ಇವುಗಳನ್ನು ಆನ್​ಲೈನ್​ನಲ್ಲಿ ಉಚಿತವಾಗಿ ಮಾಡಬಹುದು. ಜನ್ಮದಿನಾಂಕ ಮೊದಲಾದವುಗಳನ್ನು
ಅಪ್​ಡೇಟ್ ಮಾಡಲು ಆಧಾರ್ ಸೆಂಟರ್​ಗೆ ಹೋಗಬೇಕಾಗುತ್ತದೆ.

**ಐಡಿ ಪ್ರೂಫ್ ಆಗಿ ಸಲ್ಲಿಸಬಹುದಾದ ದಾಖಲೆಗಳು**
 ಪಾಸ್​ಪೋರ್ಟ್ ಪ್ಯಾನ್ ಕಾರ್ಡ್ ರೇಷನ್ ಕಾರ್ಡ್
ವೋಟರ್ ಐಡಿ ಡ್ರೈವಿಂಗ್ ಲೈಸೆನ್ಸ್ ನರೇಗಾ ಕಾರ್ಡ್ ಪಿಂಚಣಿ ಕಾರ್ಡ್ ವಿವಾಹ ನೊಂದಣಿ ದಾಖಲೆ ಮಾನ್ಯ
ಶಿಕ್ಷಣ ಸಂಸ್ಥೆಯ ಐಡಿ ಕಾರ್ಡ್ ಹೆಸರು ಮತ್ತು ಫೋಟೋ ಇರುವ ಬ್ಯಾಂಕ್ ಪಾಸ್​ಬುಕ್

**ಉಚಿತವಾಗಿ ಆಧಾರ್ ಮಾಹಿತಿ ಅಪ್ಡೇಟ್ ಮಾಡೋದು ಹೇಗೆ?**
 ಆಧಾರ್ ನಲ್ಲಿ ಮಾಹಿತಿ ಅಪ್ಡೇಟ್ ಮಾಡೋದು
ಹೇಗೆ? *ಯುಐಡಿಎಐ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. *myaadhaar ಮೇಲೆ ಕ್ಲಿಕ್ ಮಾಡಿ. *ಆ ಬಳಿಕ‘
Update Aadhaar’ಆಯ್ಕೆ ಮಾಡಿ. *ನಿಮ್ಮ ಆಧಾರ್ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ.*
ಆ ಬಳಿಕ ‘Send OTP’ಬಟನ್ ಮೇಲೆ ಕ್ಲಿಕ್ ಮಾಡಿ. *ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿ 
ನಮೂದಿಸಿ. *Login ಬಟನ್ ಮೇಲೆ ಕ್ಲಿಕ್ ಮಾಡಿ. *ನಿಮಗೆ ಯಾವ ಮಾಹಿತಿಯನ್ನು ನವೀಕರಿಸಬೇಕು ಅದನ್ನು
ಆಯ್ಕೆ ಮಾಡಿ. ಉದಾಹರಣೆಗೆ ವಿಳಾಸ ಬದಲಾಯಿಸಬೇಕಿದ್ದರೆ ‘Address Update’ ಆಯ್ಕೆ ಮಾಡಿ. *ಈಗ ನಿಮ್ಮ
ವಿಳಾಸ ದೃಢೀಕರಣ ದಾಖಲೆಯ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿ. *ಆ ಬಳಿಕ ‘Submit’ಬಟನ್ ಮೇಲೆ ಕ್ಲಿಕ್
ಮಾಡಿ. *ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅಪ್ಡೇಟ್ ರಿಕ್ವೆಸ್ಟ್ ಸಂಖ್ಯೆ (URN) ಬರುತ್ತದೆ.

[Renuka Swamy Murder: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರು ಅಂದರ್‌](https://hosakannada.com/2024/06/14/renuka-swamy-murder-case-two-more-accused/)

Advertisement
