# Lakno: ಪಿಸ್ತೂಲ್ ಹಿಡಿದು ರಸ್ತೆಗೆ ಎಂಟ್ರಿ ಕೊಟ್ಟ ವ್ಯಕ್ತಿ – ಗಂಟೆಗಳಿಂದ ಇದ್ದ ಟ್ರಾಫಿಕ್ ನಿಮಿಷದಲ್ಲಿ ಕ್ಲಿಯರ್!!

- Link: https://hosakannada.com/news/a-man-carrying-a-pistol-cleared-a-traffic-jam-that-had-been-going-on-for-hours-in-minutes/
- Published: 2026-04-05T17:11:37+00:00
- Author: ಹೊಸಕನ್ನಡ ನ್ಯೂಸ್

Lakno: ಮಹಾನಗರಗಳಲ್ಲಿನ ಟ್ರಾಫಿಕ್ ಜಾಮ್ ಸಮಸ್ಯೆ ಅಲ್ಲಿನ ವಾಸಿಗಳಿಗೆ ದೊಡ್ಡ ತಲೆನೋವಾಗಿ ಸಂಭವಿಸಿದೆ.
ಅಂತೆಯೇ ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದ್ದು, ಇದನ್ನು ವ್ಯಕ್ತಿ 
ಒಬ್ಬ ಪಿಸ್ತೂಲ್ ಹಿಡಿದು ಕ್ಲಿಯರ್ ಮಾಡಿರುವ ಘಟನೆ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

Sponsored

ಹೌದು, ಲಕ್ನೋ ಮಹಾನಗರದ ರಸ್ತೆ ಒಂದರಲ್ಲಿ ಗಂಟೆಗಟ್ಟಲೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆದರೆ
ಇಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದುಕೊಂಡು ಬಂದು ಕೆಲವೇ ನಿಮಿಷಗಳಲ್ಲಿ ಟ್ರಾಫಿಕ್ ಕ್ಲಿಯರ್ 
ಮಾಡಿಸಿರುವ ಘಟನೆ ನಡೆದಿದೆ ಈ ಕುರಿತಾದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Advertisement

Advertisement

ಇದೀಗ ವಿಡಿಯೋ ವೈರಲ್ ಆಗಿದೆ. ಸಹದತ್ ಗಂಜ್ ಪೊಲೀಸ್ ಠಾಣೆ ಪ್ರದೇಶದ ರಾಜಬ್ ಗಂಜ್ ರಸ್ತೆಯಲ್ಲಿ ಈ 
ಘಟನೆ ನಡೆದಿದೆ. ಟ್ರಾಫಿಕ್ ತೆರವುಗೊಳಿಸಲು ಮತ್ತು ತನ್ನ ವಾಹನವನ್ನು ಮುಂದೆ ಸಾಗಿಸಲು ಪಿಸ್ತೂಲ್ 
ಬಳಸಿದ್ದಾರೆ. ವರದಿಗಳ ಪ್ರಕಾರ, ಆ ವ್ಯಕ್ತಿ ಪಿಸ್ತೂಲ್ ಹಿಡಿದು ರಸ್ತೆಯಲ್ಲಿ ನಡೆಯುತ್ತಿರುವುದು 
ಪ್ರಯಾಣಿಕರಲ್ಲಿ ಭೀತಿ ಮೂಡಿಸಿತ್ತು. ವೈರಲ್ ಆಗಿರುವ ವಿಡಿಯೋವನ್ನು ಲಕ್ನೋ ಪೊಲೀಸರು ಗಮನಿಸಿದ್ದು,
ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ. 

Advertisement
