# UPSC ರ್ಯಾಂಕ್ ಬಂದಿದ್ದು ಕರ್ನಾಟಕದ ಹುಡುಗ – ಸನ್ಮಾನ ಗಿಟ್ಟಿಸಿಕೊಂಡದ್ದು ಮಾತ್ರ ಬಿಹಾರದ ಯುವಕ

- Link: https://hosakannada.com/news/a-boy-from-karnataka-got-the-upsc-rank-only-a-youth-from-bihar-got-the-honour/
- Published: 2026-03-14T16:02:45+00:00
- Author: ಹೊಸಕನ್ನಡ ನ್ಯೂಸ್

UPSC: ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ
ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ.  ಕೆಲವು ದಿನಗಳ ಹಿಂದೆ 301ನೇ ರ್ಯಾಂಕ್ ಗೆ ಸಂಬಂಧಿಸಿದಂತೆ ಗೊಂದಲ
ಒಂದು ಏರ್ಪಟ್ಟಿತ್ತು. 301ನೇ ಱಂಕ್​ನಲ್ಲಿ ‘ಆಕಾಂಕ್ಷಾ ಸಿಂಗ್’ ಎಂಬ ಹೆಸರಿದೆ. ಇದೀಗ ಇಬ್ಬರು ಯುವತಿಯರು
ತಾವೇ ಆ ರ್ಯಾಂಕ್ ಪಡೆದ ಅಸಲಿ ಅಭ್ಯರ್ಥಿ ಎಂದು ಹಕ್ಕು ಸಾಧಿಸಿದ್ದರು. ಇದರ ಬೆನ್ನಲ್ಲೇ ಇದೀಗ ಬಿಹಾರದ
ಯುವಕನೊಬ್ಬ ತಾನು ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಬಂದಿದ್ದೇನೆ ಎಂದು ಸುಳ್ಳು ಹೇಳಿ ಪ್ರಚಾರ
ಗಿಟ್ಟಿಸಿಕೊಂಡಿದ್ದಾನೆ. 

Sponsored

ಯಸ್, ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರಿಕ ಸೇವಾ ಪರೀಕ್ಷೆಯಲ್ಲಿ ನಾನು 440ನೇ ರ್‍ಯಾಂಕ್ ಪಡೆದಿದ್ದೇನೆ
ಎಂದು ಸುಳ್ಳು ಹೇಳಿ ಇಡೀ ಗ್ರಾಮವನ್ನೇ ರಂಜಿತ್ ಕುಮಾರ್ ಎಂಬ ಯುವಕ ನಂಬಿಸಿ, ವಂಚಿಸಿದ್ದಾನೆ. ಇದೀಗ
ಅಸಲಿ ವಿಚಾರ ತಿಳಿಯುತ್ತಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.

Advertisement

Advertisement

**ಏನಿದು ಘಟನೆ?**

ಬಿಹಾರದ ಶೇಖ್‌ಪುರ ಜಿಲ್ಲೆಯ ಫತೇಪುರ್ ಗ್ರಾಮದ ನಿವಾಸಿ ರಂಜಿತ್ ಕುಮಾರ್, ಇತ್ತೀಚೆಗೆ ಪ್ರಕಟವಾದ 
ಯುಪಿಎಸ್‌ಸಿ ಫಲಿತಾಂಶದಲ್ಲಿ ತಾನು 440ನೇ ರ್‍ಯಾಂಕ್ ಗಳಿಸಿರುವುದಾಗಿ ಘೋಷಿಸಿಕೊಂಡಿದ್ದನು. ಈ ಸುದ್ದಿ
ಹರಡುತ್ತಿದ್ದಂತೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರು ಆತನನ್ನು ಅದ್ದೂರಿಯಾಗಿ
ಮೆರವಣಿಗೆ ಮಾಡಿ, ಹೂಮಾಲೆ ಹಾಕಿ ಸನ್ಮಾನಿಸಿದ್ದರು. ಸ್ಥಳೀಯ ರಾಜಕಾರಣಿಗಳು ಪೊಲೀಸರು ಕಾರ್ಯಕ್ರಮವನ್ನು
ಏರ್ಪಡಿಸಿ, ಸನ್ಮಾನ ಮಾಡಿ ಆತನ ಭಾಷಣಗಳನ್ನು ಕೇಳಿಸಿದ್ದರು. 

ಆದರೆ, ಈತನ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ರ್‍ಯಾಂಕ್
ಪಟ್ಟಿಯನ್ನು ಪರಿಶೀಲಿಸಿದಾಗ ಸತ್ಯ ಹೊರಬಂದಿದೆ. 440ನೇ ರ್‍ಯಾಂಕ್ ಪಡೆದವರು ಕರ್ನಾಟಕದ ರಂಜಿತ್ ಕುಮಾರ್
ಆರ್. ಎಂಬ ಅಭ್ಯರ್ಥಿಯಾಗಿದ್ದರು. ಬಿಹಾರದ ಈ ರಂಜಿತ್ ಕುಮಾರ್‌ಗೂ ಆ ರ್‍ಯಾಂಕ್‌ಗೂ ಯಾವುದೇ ಸಂಬಂಧವಿರಲಿಲ್ಲ.
ಹೆಸರಿನ ಸಾಮ್ಯತೆಯನ್ನು ಬಳಸಿಕೊಂಡು ಇಡೀ ಸಮಾಜವನ್ನು ಈತ ದಿಕ್ಕು ತಪ್ಪಿಸಿದ್ದ. ಯಾವಾಗ ಈ ವಿಷಯ ಗ್ರಾಮಸ್ಥರಿಗೆ
ಮತ್ತು ಪೊಲೀಸರಿಗೆ ತಿಳಿಯಿತೋ, ಆ ಕೂಡಲೇ ರಂಜಿತ್ ಕುಮಾರ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು
ಗ್ರಾಮದಿಂದ ಪರಾರಿಯಾಗಿದ್ದಾನೆ

Advertisement
