# ಮೊಮ್ಮಗಳ ವಯಸ್ಸಿನ 20ರ ಯುವತಿಯನ್ನ ಮದುವೆಯಾದ 70ರ ಮಾಜಿ ಕಾರ್ಪೋರೇಟರ್!!

- Link: https://hosakannada.com/news/a-70-year-old-former-corporator-married-a-20-year-old-woman-the-same-age-as-his-granddaughter/
- Published: 2026-05-25T15:11:49+00:00
- Author: ಹೊಸಕನ್ನಡ ನ್ಯೂಸ್

70 ವರ್ಷದ ಸಮಾಜವಾದಿ ಪಕ್ಷದ ಮಾಜಿ ಕಾರ್ಪೋರೇಟರ್ ಹಾಜಿ ಖಲೀಲ್ ಅವರು ತಮ್ಮ ಮೊಮ್ಮಗಳ ವಯಸ್ಸಿನ 20
ವರ್ಷದ ಯುವತಿಯನ್ನು ಮದುವೆಯಾಗಿದ್ದಾನೆ. ಈಗ ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Sponsored

ಉತ್ತರ ಪ್ರದೇಶದ ಘಾಜಿಯಾಬಾದ್‌ನ ಕೈಲಾ ಭಟ್ಟಾ ಪ್ರದೇಶದ ನಿವಾಸಿಯಾಗಿರುವ ಹಾಜಿ ಖಲೀಲ್, ಇತ್ತೀಚೆಗೆ
20 ವರ್ಷದ ಯಸ್ಮೀನ್ ಎಂಬ ಯುವತಿಯನ್ನು ನಿಕಾಹ್ ಮಾಡಿಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ
ಅವರ ಎರಡನೇ ಪತ್ನಿ ನಾಜ್ರೀನ್ ಮತ್ತು ಅವರ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಜ್ರೀನ್ ಅವರು
ತಮ್ಮ ಮಗನೊಂದಿಗೆ ಪೊಲೀಸ್ ಕಮಿಷನರ್ ಕಚೇರಿಗೆ ಧಾವಿಸಿ, ಹಾಜಿ ಖಲೀಲ್ ವಿರುದ್ಧ ಗಂಭೀರ ದೂರು ನೀಡಿದ್ದಾರೆ.

Advertisement

Advertisement

ನಾಜ್ರೀನ್ ಅವರ ಪ್ರಕಾರ, ತಾವು ಪ್ರಸ್ತುತ ವಾಸವಿರುವ ಮನೆಯನ್ನು ನಿಕಾಹ್ ಸಮಯದಲ್ಲಿ ‘ಮೆಹರ್’ ಆಗಿ
ನೀಡಲಾಗಿತ್ತು. ಆದರೆ ಈಗ ನಾಲ್ಕನೇ ಮದುವೆಯಾದ ನಂತರ, ಹಾಜಿ ಖಲೀಲ್ ಮತ್ತು ಅವರ ಹೊಸ ಪತ್ನಿ ಈ ಆಸ್ತಿಯನ್ನು
ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ವಿರೋಧಿಸಿದರೆ ಜೈಲಿನಿಂದ ಬಂದಿರುವ ಗೂಂಡಾಗಳ ಮೂಲಕ ಬೆದರಿಕೆ 
ಹಾಕುತ್ತಿದ್ದಾರೆ ಮತ್ತು ಕೊಲೆ ಮಾಡುವುದಾಗಿ ಹೆದರಿಸುತ್ತಿದ್ದಾರೆ ಎಂದು ನಾಜ್ರೀನ್ ಪೊಲೀಸರ ಮುಂದೆ
ಅಳಲು ತೋಡಿಕೊಂಡಿದ್ದಾರೆ.

ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಹಾಜಿ ಖಲೀಲ್, ‘ಇದು ಕೇವಲ ಆಸ್ತಿ ವಿವಾದ. ನಾಜ್ರೀನ್ ನನ್ನ
ಪತ್ನಿ ಎಂಬುದಕ್ಕೆ ಅವರ ಬಳಿ ಯಾವುದೇ ಸಾಕ್ಷಿ ಇಲ್ಲ, ಅವರು ಅದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಿ’
ಎಂದು ಸವಾಲು ಹಾಕಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಸತ್ಯಾಸತ್ಯತೆ ಪರಿಶೀಲಿಸಿ
ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

**ಹಾಜಿ ಖಲೀಲ್ ಯಾರು?**

ಹಾಜಿ ಖಲೀಲ್ ಅವರು ಸ್ಥಳೀಯ ರಾಜಕಾರಣದಲ್ಲಿ ಹಳೆಯ ಮುಖ. 1995 ಮತ್ತು 2000ರಲ್ಲಿ ಅವರು ಇಸ್ಲಾಂನಗರ
ವಾರ್ಡ್‌ನಿಂದ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದರು. ಈ ಹಿಂದೆಯೂ ಅವರ ಮೇಲೆ ಕೋಟ್ಯಂತರ ರೂಪಾಯಿ ಮೌಲ್ಯದ
ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡ ಆರೋಪ ಕೇಳಿಬಂದಿತ್ತು.

Advertisement
