# 70 ನೇ ವಯಸ್ಸಿನಲ್ಲಿ ಮೊದಲ ಮಗು ಹೆತ್ತ ಮಹಿಳೆ ;  ಮದುವೆಯಾಗಿ 54 ವರ್ಷದ ಮೇಲೆ ತಂದೆಯಾದ ಮಾಜಿ ಸೈನಿಕ

- Link: https://hosakannada.com/news/70year-old-women-gave-birth-to-baby/
- Published: 2022-08-09T18:54:40+00:00
- Author: ನಿಶ್ಮಿತಾ ಎನ್.

ರಾಜಸ್ಥಾನ: ಪ್ರತಿಯೊಂದು ದಂಪತಿಗೂ ತಮಗೊಂದು ಮಗುವಾದ್ರೆ ಎಷ್ಟು ಚೆನ್ನಾಗಿತ್ತು ಅನ್ನೋ ಆಸೆ ಇದ್ದೇ
ಇರುತ್ತದೆ. ಇದೀಗ ಅಂತಹುದೇ ಆಸೆಯನ್ನು ಇಟ್ಟುಕೊಂಡಿದ್ದ ದಂಪತಿ ತಮ್ಮ 70ನೇ ವಯಸ್ಸಿನ ಬಳಿಕ ತಂದೆ-
ತಾಯಿಯಾದ ಖುಷಿಯನ್ನು ಅನುಭವಿಸಿದ್ದಾರೆ.

Sponsored

ಹೌದು. ಇಂತಹುದೊಂದು ಅಪರೂಪದ ಪ್ರಕರಣ ರಾಜಸ್ಥಾನದಲ್ಲಿ ಕಂಡುಬಂದಿದ್ದು, ಮದುವೆಯಾದ 54 ವರ್ಷಗಳ ಬಳಿಕ
ಈ ಜೋಡಿಗೆ ಮಗುವಾಗಿದೆ. ರಾಜಸ್ಥಾನದ ಝುಂಝುನು ಎಂಬಲ್ಲಿನ ನುಹಾನಿಯಾ ಗ್ರಾಮದ ಮಾಜಿ ಯೋಧ ಗೋಪಿಚಂದ್
ಮತ್ತು ಚಂದ್ರಾವತಿ ಎಂಬವರೇ ಈ ವಿಶೇಷ ಪ್ರಕರಣ ದಂಪತಿ.

Advertisement

Advertisement

ಗೋಪಿಚಂದ್ ಕಾಲಿಗೆ ಬಾಂಗ್ಲಾ ಯುದ್ಧದಲ್ಲಿ ಗುಂಡೇಟು ಬಿದ್ದು, ಗಾಯಗೊಂಡಿದ್ದರು. ಇವರಿಗೆ ಮಕ್ಕಳು 
ಆಗಿರಲಿಲ್ಲ. ಆದರೆ ಇದೀಗ ಮದುವೆಯಾಗಿ 70 ವರ್ಷಗಳ ಬಳಿಕ, ನಿನ್ನೆ ಈ ದಂಪತಿಗೆ ಮೊದಲ ಮಗುವಾಗಿದೆ. 
ಈ ಖುಷಿಯನ್ನು ಹೇಳಿಕೊಳ್ಳಲು ಪದಗಳೇ ಸಿಗುತ್ತಿಲ್ಲ ಎಂದು ಗೋಪಿಚಂದ್ ಮಗುವಾದ ಸಂತೋಷವನ್ನು ಹಂಚಿಕೊಂಡಿದ್ದಾರೆ.
ನಾನು ತಂದೆಗೆ ಒಬ್ಬನೇ ಮಗನಾಗಿದ್ದು, ಈಗ ತಮಗೂ ಮಗುವಾಗಿದ್ದಕ್ಕೆ ಖುಷಿಯಾಗಿದೆ. ತಾಯಿ-ಮಗು ಇಬ್ಬರೂ
ಆರೋಗ್ಯವಾಗಿದ್ದಾರೆ. ಈಗ ನಾವೂ ಪ್ರಪಂಚದಲ್ಲಿ ಎಲ್ಲರಂತೆ ಇರುವಂತಾಗಿದೆ ಎಂದು ಹೇಳಿಕೊಂಡಿದ್ದಾರೆ.

ರಾಜಸ್ಥಾನದಲ್ಲಿ 70ರ ವಯಸ್ಸಿನ ಪುರುಷ-ಮಹಿಳೆ ತಂದೆ-ತಾಯಿ ಆಗಿದ್ದು ಇದೇ ಮೊದಲು ಎಂದು ವೈದ್ಯರು ಅಭಿಪ್ರಾಯ
ಪಟ್ಟಿದ್ದಾರೆ. ಈ ಮೂಲಕ ರಾಜಸ್ಥಾನದಲ್ಲಿ ಹಿರಿಯ ವಯಸ್ಸಿನಲ್ಲಿ ತಂದೆ-ತಾಯಿಯಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement
