# ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ – 132 ಸಾವು!!

- Link: https://hosakannada.com/news/7-4-magnitude-earthquake-in-colombia-132-dead/
- Published: 2026-08-11T08:10:38+00:00
- Author: ಹೊಸಕನ್ನಡ ನ್ಯೂಸ್

ದಕ್ಷಿಣ ಅಮೆರಿಕ ಖಂಡದ ಕೊಲಂಬಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಕನಿಷ್ಠ 20 ಜನರು ಬಲಿಯಾಗಿದ್ದು,
20ಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳು ಧರಾಶಾಹಿಯಾಗಿವೆ. ರಿಕ್ಟರ್ ಮಾಪಕದಲ್ಲಿ 7.4 ರಷ್ಟು ತೀವ್ರತೆ
ದಾಖಲಾಗಿರುವ ಈ ಪ್ರಬಲ ಭೂಕಂಪನದ ಧಕ್ಕೆಗೆ ಕೊಲಂಬಿಯಾ ನಡುಗಿದ್ದು, ಕನಿಷ್ಠ 132 ಜನರು ಸಾವನ್ನಪ್ಪಿದ್ದಾರೆ.
570ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

Sponsored

ಯುಎಸ್ ಜಿಯೋಲಾಜಿಕಲ್ ಸರ್ವೇ (USGS) ನೀಡಿರುವ ಮಾಹಿತಿಯಂತೆ, ಕೊಲಂಬಿಯಾದ ಚೊಕೊ ಪ್ರಾಂತ್ಯದ ‘ಸ್ಯಾನ್
ಜೋಸ್ ಡೆಲ್ ಪಾಲ್ಮಾರ್’ ಪ್ರದೇಶದ ಸಮೀಪ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಇದು ರಾಜಧಾನಿ ಬೊಗೋಟಾದಿಂದ
ಸುಮಾರು 400 ಕಿಲೋಮೀಟರ್ ಪಶ್ಚಿಮದಲ್ಲಿದ್ದು, ಭೂಮಿಯ ಆಳದಲ್ಲಿ ಸರಿಸುಮಾರು 96 ರಿಂದ 107 ಕಿಲೋಮೀಟರ್
ಆಳದಲ್ಲಿ ಈ ತೀವ್ರ ಕಂಪನ ಸಂಭವಿಸಿದೆ.

Advertisement

Advertisement

ಭೂಕAಪದ ಬಳಿಕ ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಂಡಿದ್ದು, ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ
ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Advertisement
